ಪುಣಚ : ಪುಣಚದ ಅಜೇರು ಎಂಬಲ್ಲಿ ಪರಿಶಿಷ್ಟ ಪಂಗಡದ ಶಾರದ ಎನ್ನುವವರು ಗ್ಯಾಂಗ್ರಿನ್ ನಿಂದ ಬಳಲುತ್ತಿತ್ತು. 2 ದಿನಕ್ಕೊಮ್ಮೆ ಕಾಲಿನ ಡ್ರೆಸ್ಸಿಂಗ್ ಮಾಡಬೇಕಾಗಿದ್ದು ಹಾಗೂ ಅವರ ಮನೆಗೆ ತೆರಳಲು ಸರಿಯಾದ ದಾರಿಯ ವ್ಯವಸ್ಥೆ ಕೂಡ ಇಲ್ಲದ ಕಾರಣ ಈ ತಾಯಿ ಮತ್ತು ಮಗನ ಕಷ್ಟಕ್ಕೆ ಸ್ಪಂದಿಸುವ ಸಲುವಾಗಿ ವರದಿಯನ್ನು ಮಾಡಲಾಗಿತ್ತು, ನಮ್ಮ ವರದಿಯ ಫಲಶ್ರುತಿಯಾಗಿ ಶಾರದ ರವರ ಮನೆಗೆ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಎಂ, ಪಂಚಾಯತ್ ಸದಸ್ಯರು ಹಾಗೂ ಭೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಶೀಘ್ರದಲ್ಲಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಎಂ. ರಸ್ತೆ ವ್ಯವಸ್ಥೆಯಾಗಬೇಕಾದರೆ ಅಕ್ಕಪಕ್ಕದ ಎರಡು ಮನೆಗಳ ಒಪ್ಪಿಗೆ ಬೇಕಿದ್ದು, ಎರಡು ಮನೆಯವರ ಹತ್ತಿರ ಮಾತನಾಡಿ ಅವರ ಮನವೊಳಿಸಿ ನಂತರ ಒಪ್ಪಿಗೆ ನೀಡಿರುತ್ತಾರೆ. ರಸ್ತೆ ನಿರ್ಮಾಣವಾದರೆ ಮೂರು ಮನೆಗಳಿಗೂ ಪ್ರಯೋಜನವಿದ್ದು, ಮಳೆಗಾಲವಾದ ಕಾರಣ ಸದ್ಯದ ಸ್ಥಿತಿಯಲ್ಲಿ ರಸ್ತೆ ಕಾಮಗಾರಿ ಕೆಲಸ ಪ್ರಾರಂಭಿಸಲು ಕಷ್ಟವಾಗುತ್ತದೆ. ಮಳೆಗಾಲ ಕಡಿಮೆಯಾಗುತ್ತಿದ್ದಂತೆ ರಸ್ತೆ ಕಾಮಗಾರಿ ನಡೆಸಲಾಗುವುದು ಎಂದರು.
ಶಾರದಾ ಅವರಿಗೇ ಗ್ಯಾಂಗ್ರಿನ್ ಇರುವ ಕಾರಣದಿಂದಾಗಿ ಎರಡು ದಿನಗಳಿಗೊಮ್ಮೆ ಡ್ರೆಸ್ಸಿಂಗ್ ಮಾಡಿದರೆ ಕಾಯಿಲೆ ಗುಣವಾಗುವುದಿಲ್ಲ ಆದ್ದರಿಂದ ಅವರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ತೆರಳುವಂತೆ ಮಾಹಿತಿ ನೀಡಿದ್ದು, ಅವರು ಅಲ್ಲಿಗೆ ತೆರಳುವ ವ್ಯವಸ್ಥೆಗಳನ್ನು ಗ್ರಾಮ ಪಂಚಾಯತ್ ಕಡೆಯಿಂದ ಮಾಡಿಕೊಡಲಾಗುವುದು ಹಾಗೆಯೇ ಆಸ್ಪತ್ರೆಯಲ್ಲಿ ವೈದ್ಯರ ಬಳಿ ಮಾತಾಡಿ ಉತ್ತಮ ಚಿಕಿತ್ಸೆಯನ್ನು ಕೊಡಿಸುವ ಭರವಸೆ ನೀಡಿದ್ದು, ಅವರು ಗುಣಮುಖರಾಗ ಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ಅವರು ಕೂಡ ಒಪ್ಪಿಗೆ ನೀಡಿದ್ದು, ಅವರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ತೆರಳುವುದಕ್ಕೆ ವಾಹನದ ವ್ಯವಸ್ಥೆ ಕೂಡ ನಾವೇ ಮಾಡಿಕೊಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪುಣಚ ಗ್ರಾಮ ಪಂಚಾಯತ್ ಪಿಡಿಓ, ಅಜೇರು ಭಾಗದ ಪಂಚಾಯತ್ ಸದಸ್ಯ ತೀರ್ಥರಾಮ್, ಅಶೋಕ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸವಿತಾ ಸುಬ್ಬ ನಾಯ್ಕ್, ಉದಯ ಭಾಸ್ಕರ್ ಉಪಸ್ಥಿತರಿದ್ದರು.