ವಿಟ್ಲ: ದಲಿತ ಬಾಲಕಿಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಬೆದ್ರಕಾಡು ಎಂಬಲ್ಲಿ ನಡೆದಿದೆ.
ಬಾಲಕಿಯ ಕೃಷಿ ಜಮೀನಿಗೆ ನೆರೆಮನೆಯ ನಜೀರ್ ಎಂಬವನ ಮನೆಯ ಆಡುಗಳು ಬಂದಿದ್ದು, ಅದನ್ನು ಓಡಿಸಲು ಹೋದ ಬಾಲಕಿಯೊಂದಿಗೆ ನಜೀರ್ ಎಂಬಾತ ಅಸಭ್ಯವಾಗಿ ವರ್ತಿಸಿದ್ದಾನೆ.
ಕೃಷಿ ಹಾಳು ಮಾಡುತ್ತಿರುವ ಆಡುಗಳನ್ನು ಓಡಿಸಿದ್ದಕ್ಕೆ ಪ್ರಶ್ನಿಸಿದ ನಜೀರ್ , ಬಾಲಕಿಯ ಅಕ್ಕ, ಬಾವನಿಗೆ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದು, ನಂತರ ಆರೋಪಿ ನಜೀರ್ ಪ್ಯಾಂಟ್ ಜಾರಿಸಿ ವಿಡಿಯೋ ಮಾಡು ಎಂದು ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ವರದಿಯಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.