ವಿಟ್ಲ : ಸೈಂಟ್ ಅಲೋಸಿಯಸ್ ಕಾಲೇಜು ಮಂಗಳೂರು ಇಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಹ್ಯಾಂಡ್ ಬಾಲ್ ಪಂದ್ಯಾಟದಲ್ಲಿ ವಿಠಲ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಪಡೆದಿದ್ದು ಸಿಂಚನ,ಸುಶ್ಮಿತಾ,ರೇಖಾ,ರೇಷ್ಮಾ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ರೇಷ್ಮಾ , ರೇಖಾ, ಸಿಂಚನ , ಹಿತಾ , ಸುಶ್ಮಿತಾ , ಅಶ್ವಿತ, ಅನನ್ಯ , ಕೆ ಸ್ಪೂರ್ತಿ ,ಪಲ್ಲವಿ ಜಿ. ಎಸ್ ,ವಿನ್ಯಾ ಸಿ ಶೆಟ್ಟಿ ,ವರ್ಷಿಣಿ ಭಾಗವಹಿಸಿರುತ್ತಾರೆ.
ವಿಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಆಟಗಾರರಾಗಿರುವ ಶ್ರೀನಿವಾಸ ಗೌಡ ತರಬೇತಿ ನೀಡಿರುತ್ತಾರೆ.
ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ ಅಭಿನಂದನೆ ಸಲ್ಲಿಸಿದ್ದಾರೆ.


























