ಪುತ್ತೂರು : ಸ್ಕೂಟರ್ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕೆಯ್ಯೂರು ಗ್ರಾಮದ ಎರಕ್ಕಳ ಬೆಳಿಯಪ್ಪ ಗೌಡರವರ ಪುತ್ರ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ವೀರಾಂಜನೇಯ ಘಟಕ ತಿಂಗಳಾಡಿಯ ಸಹ ಗೋ ರಕ್ಷಕ ಪ್ರಮುಖ್ ಕೀರ್ತನ್ ಗೌಡ (22) ಮೃತರು.
ಸೆ.10 ರಂದು ಮಧ್ಯರಾತ್ರಿ ಕೆದಂಬಾಡಿ ಗ್ರಾಮದ ತ್ಯಾಗರಾಜನಗರದಲ್ಲಿ ಸ್ಕೂಟರ್ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಕೀರ್ತನ್ ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.