ಪುತ್ತೂರು : ಕೆಲ ದಿನಗಳ ಹಿಂದೆ ಬೈಕ್ ನಿಂದ ಬಿದ್ದು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಳ್ಯದ ಬೀರಮಂಗಲ ನಿವಾಸಿ, ಬಂಟ್ವಾಳದ ಕಾಮಾಜೆ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ಅಚ್ಚುತ ಪೂಜಾರಿಯವರ ಪತ್ನಿ, ಮಾಡಾವು ಜ್ಯೂನಿಯರ್ ಕಾಲೇಜಿನ ಅತಿಥಿ ಉಪನ್ಯಾಸಕಿ ಸುನಂದ ಅಚ್ಚುತ ಪೂಜಾರಿಯವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಶುಕ್ರವಾರ ಸಂಬಂಧಿಕರೋರ್ವರ ಬೈಕ್ ನಲ್ಲಿ ಹೋಗುತ್ತಿರುವಾಗ ಮಳೆ ಬಂದ ಹಿನ್ನಲೆ ಕೊಡೆ ಬಿಡಿಸಿದ ಸಂದರ್ಭದಲ್ಲಿ, ಗಾಳಿಗೆ ಕೊಡೆ ಎಳೆಯಲ್ಪಟ್ಟು ಶಿಕ್ಷಕಿ ಬೈಕ್ ನಿಂದ ಜಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯವಾದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಪರೇಶನ್ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ (ಸೆ.11) ನಿಧನರಾದರು ಎಂದು ತಿಳಿದುಬಂದಿದೆ.