ಪುತ್ತೂರು : ಹಿಂತೆಗೆಯುವ ವೇಳೆ ಕಾರು ಹಠಾತ್ ಅಂಗಡಿಗೆ ನುಗ್ಗಿದ ಘಟನೆ ಕಿಲ್ಲೆ ಮೈದಾನದಲ್ಲಿ ನಡೆದಿದೆ.
ಕಿಲ್ಲೆ ಮೈದಾನಕ್ಕೆ ಬಂದಿದ್ದವರೋರ್ವರ ಕಾರು ರಿವರ್ಸ್ ತೆಗೆಯುವ ವೇಳೆ ಪಕ್ಕದಲ್ಲಿದ್ದ ಚರುಂಬುರಿ ಸ್ಟಾಲ್ ಗೆ ನುಗ್ಗಿದ್ದು, ಘಟನೆಯಲ್ಲಿ ಅಂಗಡಿಯಲ್ಲಿದ್ದ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಕಾರಿಗೆ ಹಾನಿಯಾಗಿದ್ದು, ಚರುಂಬುರಿ ಸ್ಟಾಲ್ ಕೂಡ ಜಖಂಗೊಂಡಿದೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.