ಮಂಗಳೂರು: ಕೊರೋನಾ ಮಹಾಮಾರಿಯ ಎರಡನೇ ಅಲೆಗೆ ಇಡೀ ರಾಜ್ಯದ ಜನರು ಕಂಗೆಟ್ಟು ಜೀವ ಉಳಿಸಿಕೊಂಡರೆ ಸಾಕು ಎನ್ನುತ್ತಿರುವ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಒಂದೇ ಕಂತಿನಲ್ಲಿ ಶಾಲಾ ಶುಲ್ಕ ಪಾವತಿ ಮಾಡುವಂತೆ ವಿದ್ಯಾರ್ಥಿಗಳ ಪೋಷಕರ ಮೇಲೆ ಆಡಳಿತ ಮಂಡಳಿಯಿಂದ ಶುಲ್ಕ ಕಟ್ಟುವಂತೆ ಒತ್ತಡ ಹಾಕಲಾಗಿತ್ತು.
ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ತಡೆಹಿಡಿಯುವುದು, ವರ್ಗಾವಣೆ ಪತ್ರ ನೀಡದ ಇರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತಕ್ಕೆ ಪೋಷಕರಿಂದ ದೂರು ನೀಡಲಾಗಿತ್ತು.
ಇದಕ್ಕೆ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೊವಿಡ್ ನಿಂದ ಜನರು ಸಂಕಷ್ಟ ಎದುರಿಸಿದ್ದು ಈ ವೇಳೆ ಶಾಲಾ ಕಾಲೇಜುಗಳಿಂದ ಪೋಷಕರ ಮೇಲೆ ಒತ್ತಡ ಹೇರದಂತೆ ಸೂಚಿಸಿದ್ದಾರೆ. ಒತ್ತಡ ಹೇರಿದಲ್ಲಿ ಶಿಕ್ಷಣ ಸಂಸ್ಥೆ ಮೇಲೆ ಶಿಕ್ಷಣ ಕಾಯ್ದೆ ಅಡಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.