ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಕೂವೆಂಜ ಎಂಬಲ್ಲಿ ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.11ರಂದು ನಡೆದಿದೆ. ಕೂವೆಂಜ ನಿವಾಸಿ ನಿವೃತ್ತ ಯೋಧ 58 ವರ್ಷದ ತಿಮ್ಮಪ್ಪ ನಾಯ್ಕ ಎಂಬವರು ಆತ್ಮಹತ್ಯೆ ಮಾಡಿಕೊಂಡವರು.
ಇವರು ಪಕ್ಕದ ಗುಡ್ಡದಲ್ಲಿ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ ಅನಿತಾ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.