ಪುತ್ತೂರು : ಹಡಿಲು ಬಿದ್ದ ಭೂಮಿಯಲ್ಲಿ ಕೃಷಿ ಬೇಸಾಯ ಮಾಡಿ ಭತ್ತ ಬೆಳೆಯುವಂತಹ ಯೋಜನೆಯನ್ನು ಶಾಸಕ ಮಠಂದೂರು ರವರು ಪ್ರೇರೆಪಿಸಿದ್ದು, ಶಾಸಕರ ಮುತುವರ್ಜಿಯಿಂದ ತಾಲೂಕಿನಲ್ಲೇ ಪ್ರಥಮವಾಗಿ “ಗದ್ದೆಗೆ ಇಳಿಯೋಣ ಬನ್ನಿ” ಎಂಬ ಆಂದೋಲನಕ್ಕೆ ನಾಂದಿಯಾಗಿ ಕುಂಬ್ರದ ಕೆಪಿಎಸ್ ಶಾಲೆಯಲ್ಲಿ ಕೃಷಿ ಚಟುವಟಿಕೆಗೆ ಜೂ.12 ರಂದು ಚಾಲನೆ ನೀಡಿದರು.
ಶಾಲಾ ಆಟದ ಮೈದಾನವನ್ನು ಅಭಿವೃದ್ಧಿಪಡಿಸಲಾಗಿದೆ. ಸುಮಾರು ಎರಡು ಎಕ್ರೆ ವಿಸ್ತೀರ್ಣದಲ್ಲಿ ಆಟದ ಮೈದಾನ ಉಬ್ಬು ತಗ್ಗುಗಳಿಂದ ಕೂಡಿದ್ದ ಆಟದ
ಮೈದಾನವನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ ವಿಶಾಲವಾದ ಆಟದ ಮೈದಾನ ಮಳೆಗಾಲದಲ್ಲಿ ಕ್ರೀಡೆಗೆ ಬಳಸದೇ ಇರುವ ಕಾರಣ ಈ ಬಾರಿ ಮೈದಾನದಲ್ಲಿ ಭತ್ತ ಕೃಷಿ ಮಾಡಲು ಯೋಜನೆ ರೂಪಿಸಲಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬುಡಿಯಾರ್ ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ಧರ್ಮಸ್ಥಳ ಸ್ವಸಹಾಯ ಸಂಘದ ಕುಂಬ್ರ ಒಕ್ಕೂಟದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಕೆಪಿಎಸ್ ಶಾಲೆಯ ಕಾರ್ಯಾಧ್ಯಕ್ಷರಾದ ನಿತೀಶ್ ಕುಮಾರ್ ಶಾಂತಿವನ ಉಪಸ್ಥಿತರಿದ್ದರು.