ಮುಂಬೈ : ಭಾರತದ ಶ್ರೀಮಂತ ಉದ್ಯಮಿ ಮತ್ತು ಟಾಟಾ ಸನ್ಸ್ ಚೇರ್ಮನ್ ಆಗಿರೋ ರತನ್ ಟಾಟಾ ಕೊನೆಯುಸಿರೆಳೆದಿದ್ದಾರೆ.
ಐಸಿಯುನಲ್ಲಿ ಟ್ರೀಟ್ಮೆಂಟ್ ನೀಡಿದ್ರೂ ಚಿಕಿತ್ಸೆ ಫಲಿಸದೆ ರತನ್ ಟಾಟಾ ತಮ್ಮ ಜೀವನದ ಅಂತಿಮ ಉಸಿರು ನಿಲ್ಲಿಸಿದ್ದಾರೆ.
ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ, ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 86 ವರ್ಷದ ರತನ್ ಟಾಟಾ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.
ಎಂದಿನಂತೆಯೇ ಜನರಲ್ ಚೆಕಪ್ಗಾಗಿ ಆಸ್ಪತ್ರೆಗೆ ಭೇಟಿ ನೀಡಿರುವುದಾಗಿ ತಾವೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಿದ್ರೂ ಫಲಿಸದೆ ನಿಧನರಾಗಿದ್ದಾರೆ.
1991ರಲ್ಲಿ ಟಾಟಾ ಸನ್ಸ್ ಚೇರ್ಮನ್ ಆಗಿದ್ದ ರತನ್ ಟಾಟಾ 2012ರವರೆಗೂ ಈ ಹುದ್ದೆಯಲ್ಲಿದ್ದರು. ತಮ್ಮ ಮರಿ ಮುತ್ತಜ್ಜ ಸ್ಥಾಪನೆ ಮಾಡಿದ್ದ ಗ್ರೂಪ್ ಅನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಯಶಸ್ಸು ಇವರಿಗಿದೆ. ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಕೆಮಿಕಲ್ಸ್ ಕೂಡ ಇದೆ.
ಭಾರತದ ಉದ್ಯೋಗ ವಲಯದ ಪಿತಾಮಹ. ಅಜಾತ ಶತ್ರು. ದೇಶ ಕಂಡ ಮಹಾನ್ ಮಾನವತಾವಾದಿ. ಬಡವರ ಬಂಧು, ಕೊಡುಗೈ ದಾನಿ. ಭಾರತದ ಶ್ರೀಮಂತ ಉದ್ಯಮಿ. ಸರಳ ಜೀವಿ. ಎಲ್ಲರ ನೆಚ್ಚಿನ ರತನ್ ಟಾಟಾ ತಮ್ಮ ಜೀವನ ಬಂಡಿಯನ್ನು ನಿಲ್ಲಿಸಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದಾಗ ಕೋಟಿ ಕೋಟಿ ಹಣವನ್ನು ದೇಣಿಗೆ ನೀಡಿದ್ದರು. ರತನ್ ಟಾಟಾ 2000ನೇ ಇಸ್ವಿಯಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ.



























