ವಿಟ್ಲ : ಹಾಡಹಗಲೇ ಎರಡು ಮನೆಗಳಿಗೆ ಕಳ್ಳರು ನುಗ್ಗಿದ ಘಟನೆ ವಿಟ್ಲ ಸಮೀಪದ ಅಳಕೆಮಜಲು ಕೆಮನಾಜೆ ಎಂಬಲ್ಲಿ ನಡೆದಿದೆ.
ಅಳಕೆಮಜಲು ಕೆಮನಾಜೆ ನಿವಾಸಿ ಪುಷ್ಪರಾಜ್ ಹಾಗೂ ಕೃಷ್ಣಪ್ಪ ಕುಲಾಲ್ ಎಂಬವರ ಮನೆಗೆ ನುಗ್ಗಿದ ಖದೀಮರು ನಗ-ನಗದು ದೋಚಿ ಪರಾರಿಯಾಗಿದ್ದಾರೆನ್ನಲಾಗಿದೆ.
ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು, ವಿಟ್ಲ ಠಾಣಾ ಇನ್ಸ್ಪೆಕ್ಟರ್ ನಾಗರಾಜ್ ಹೆಚ್.ಇ., ಸಬ್ ಇನ್ಸ್ಪೆಕ್ಟರ್ ಕೌಶಿಕ್ ಮತ್ತು ಪೊಲೀಸ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.