ಚೆನ್ನೈ : ಮೈಸೂರಿನಿಂದ ದರ್ಭಾಂಗ್ಗೆ ತೆರಳುತ್ತಿದ್ದ ಭಾಗಮತಿ ಎಕ್ಸ್ಪ್ರೆಸ್ ರೈಲು, ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದ್ದು, ಎರಡು ಬೋಗಿಗಳು ಹೊತ್ತಿ ಉರಿದಿವೆ.
ಶುಕ್ರವಾರ ಮೈಸೂರಿನಿಂದ ದರ್ಭಾಂಗ್ಗೆ ಭಾಗಮತಿ ಎಕ್ಸ್ಪ್ರೆಸ್ ರೈಲು ಪ್ರಯಾಣಿಸುತ್ತಿತ್ತು. ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.
ಭಾಗಮತಿ ಎಕ್ಸ್ಪ್ರೆಸ್ರೈಲಿನ ಆರು ಬೋಗಿಗಳು ಹಳಿತಪ್ಪಿದ್ದು, 2 ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರೈಲು ಹಳಿ ತಪ್ಪಿರುವುದು ಈ ಅವಘಡಕ್ಕೆ ಕಾರಣವಾಗಿರಬಹುದು. ಲೂಪ್ ಲೈನ್ ಪ್ರವೇಶಿಸಿ ಬಳಿಕ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.