ಮಡಿಕೇರಿ : ದಸರಾ ಹಿನ್ನೆಲೆಯಲ್ಲಿ ಅ.12 ರ ಶನಿವಾರ ಮದ್ಯಾಹ್ನದಿಂದ ಭಾನುವಾರ ಬೆಳಗಿನವರೆಗೆ ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ವಾಹನಗಳ ಮಾರ್ಗ ಬದಲಾಯಿಸಿ ಮಡಿಕೇರಿ ಜಿಲ್ಲಾಡಳಿತ ಆದೇಶಿಸಿದೆ.
ಮೈಸೂರಿನಿಂದ ಮಂಗಳೂರು, ಸುಳ್ಯ, ಪುತ್ತೂರು ಕಡೆಗೆ ತೆರಳುವ ವಾಹನ ಸವಾರರು ಬಿಳಿಕೆರೆ ಜಂಕ್ಷನ್ ನಿಂದ ಬಲಕ್ಕೆ ತಿರುಗಿ ಕೆ.ಆರ್.ನಗರ ಮಾರ್ಗವಾಗಿ ಹಾಸನ ಕಡೆಯಿಂದ ಹಾಗೂ ಹುಣಸೂರಿನಿಂದ ಮಂಗಳೂರಿಗೆ ತಡರಳುವ ವಾಹನಗಳು ಕಟ್ಟೆಮಳಲವಾಡಿ. ಕೆ.ಆರ್. ನಗರ ಮಾರ್ಗವಾಗಿ ಹಾಸನ ಕಡೆಯಿಂದ ತೆರಳುವಂತೆ ಮಡಿಕೆರಿ ಜಿಲ್ಲಾಡಳಿತ ಪ್ರಕಟಣೆಯಲ್ಲಿ ಮನವಿ ಮಾಡಿದೆ.