ಕಡಬ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಬ ಪ್ರಖಂಡದ ವತಿಯಿಂದ ವೆನ್ಲಾಕ್ ಆಸ್ಪತ್ರೆ ಸಹಯೋಗದಲ್ಲಿ ಮರ್ದಾಳದಲ್ಲಿ ರಕ್ತದಾನ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಮರ್ದಾಳ ಗ್ರಾಮ ಪಂಚಾಯತ್ ಅದ್ಯಕ್ಷರಾದ ಹರೀಶ್ ಕೊಡಂದೂರು ನೇರವೇರಿಸಿದರು. ಮುಖ್ಯ ಅತಿಥಿಯಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯ ಕೋವಿಡ್ ನಂತಹ ಸಂಕಷ್ಟ ಕಾಲದಲ್ಲೂ ಹಿಂದೂ ಸಂಘಟನೆಯ ಮಾತೃ ಹೃದಯದ ಕಾರ್ಯಕರ್ತರು ನಿಸ್ವಾರ್ಥ ಭಾವನೆಯಿಂದ ರಕ್ತದಾನದಂತಹ ಅಭಿನಂದನಾರ್ಹ ಕಾರ್ಯ ಮಾಡುತ್ತಿದ್ದಾರೆ ಎಂದರು.
ವೆನ್ಲಾಕ್ ಅಸ್ಪತ್ರೆಯ ಬ್ಲಡ್ ಬ್ಯಾಂಕ್ ಪ್ರಭಾರ ವೈದ್ಯಯರಾಗಿರುವ ಡಾ. ಆ್ಯಂಟನಿ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ವಿಶ್ವ ಹಿಂದೂ ಪರಿಷದ್ ಪ್ರಖಂಡ ಅಧ್ಯಕ್ಷರಾದ ರಾಧಕೃಷ್ಣ ಕೋಲ್ಪೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಸೇವಾಭಾರತಿಯ ಮಾಧವ ಕೊಲ್ಪೆ, ವೆನ್ಲಾಕ್ ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಧಿತಿ ಉಪಸ್ಥಿತರಿದ್ದರು.
ಬಜರಂಗದಳ ಪ್ರಖಂಡ ಸಂಯೋಜಕ ಮೂಲಚಂದ್ರ ಕಾಂಚನ ಸ್ವಾಗತಿಸಿದರು. ಬಜರಂಗದಳ ಮರ್ದಾಳ ಘಟಕದ ಸಂಯೋಜಕರಾದ ದೇವಿಪ್ರಸಾದ್ ಧನ್ಯವಾದ ಸಮರ್ಪಿಸಿದರು. ವಿಶ್ವ ಹಿಂದೂ ಪರಿಷದ್ ಕಾರ್ಯದರ್ಶಿ ಪ್ರಮೊದ್ ನಂದುಗುರಿ, ಸೇವಾಭಾರತಿ ಪ್ರಮುಖರಾದ ಅಜಿತ್ ಅರ್ತಿಲ, ಚೇತನ್ ಮರ್ದಾಳ ಉಪಸ್ಥಿತರಿದ್ದರು.