ಪುತ್ತೂರು : ಹಿಂದೂ ಸಂಘಟನೆಯ ಮುಖಂಡರೋರ್ವರಿಗೆ ಕೇರಳದ ಅನ್ಯಕೋಮಿನ ವ್ಯಕ್ತಿಯೋರ್ವ ಠಾಣೆಯೊಳಗಡೆಯೇ ಹಲ್ಲೆ ನಡೆಸಿದ ಘಟನೆ ಉಳ್ಳಾಲದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಎಸ್.ಕೆ.ಬಿ ಟೈಗರ್ಸ್ ಪ್ರಮುಖರಾದ ಶರತ್ ಅವರ ಕಾರು ಹಾಗೂ ಕೇರಳದ ಮಂಜೇಶ್ವರದ ವ್ಯಕ್ತಿಯ ಕಾರಿನ ನಡುವೆ ಅಪಘಾತ ಸಂಭವಿಸಿ ನಂತರ ಉಳ್ಳಾಲ ಠಾಣೆಯಲ್ಲಿ ಮಾತುಕತೆ ಸಂದರ್ಭದಲ್ಲಿ ಉಳ್ಳಾಲ ಬಜರಂಗದಳದ ಮುಖಂಡರಾದ ಅರ್ಜುನ್ ಮಾಡೂರು ಅವರಿಗೆ ಕೇರಳದ ಅನ್ಯಕೋಮಿನ ವ್ಯಕ್ತಿಯೋರ್ವ ಠಾಣೆಯೊಳಗಡೆಯೇ ಹಲ್ಲೆ ನಡೆಸಿದ ಘಟನೆ ನಡೆದಿತ್ತು.
ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಬಿಜೆಪಿ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಸಂಘಪರಿವಾರದ ಮುಖಂಡರಾದ ಗೋಪಾಲ್ ಕುತ್ತಾರ್, ಪುನೀತ್ ಅತ್ತಾವರ ಠಾಣಾಧಿಕಾರಿಯವರಲ್ಲಿ ಮಾತುಕತೆ ನಡೆಸಿದರು.
ಪುತ್ತೂರು ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ಮಂಗಳೂರು ಮಂಡಲ ಯುವಮೋರ್ಚಾ ಉಪಾಧ್ಯಕ್ಷ ಸೂರಜ್ ಸಾಗರ್ ಕುಂಪಲ , ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವೀಶಂಕರ್ , ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದೀಕ್ಷಿತ್ ಕಾಪಿಕಾಡ್ ಸಹಿತ ನೂರಾರು ಕಾರ್ಯಕರ್ತರು ಮಧ್ಯರಾತ್ರಿ ಠಾಣೆಯಲ್ಲಿ ಸೇರಿ ಘಟನೆಯನ್ನು ಖಂಡಿಸಿದರು.
ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.