ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಈಗಾಗಲೇ ಹಬ್ಬಕ್ಕೆ ಊರಿಗೆ ತೆರಳಲು ಅನೇಕರು ಸಜ್ಜಾಗಿದ್ದಾರೆ. ಹೀಗಿರುವಾಗ ಹಬ್ಬಕ್ಕೆ ಮನೆಗೆ ಹೊರಟವರಿಗೆ ಖಾಸಗಿ ಇಲಾಖೆ ಶಾಕ್ ನೀಡಿದೆ. ಟಿಕೆಟ್ ದರ ಏರಿಸಿಕೊಂಡು ಅಚ್ಚರಿ ಮೂಡಿಸಿದೆ.
ಈಗಾಗಲೇ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಹಬ್ಬದ ಸಮಯದಲ್ಲಿ ಖಾಸಗಿ ಸಾರಿಗೆ ಇಲಾಖೆಗಳು ಬಸ್ಗಳ ದರ ಹೆಚ್ಚಿಸುವಂತಿಲ್ಲ ಎಂದು ಹೇಳಿತ್ತು. ಆದರೀಗ ಸಾರಿಗೆ ಇಲಾಖೆಯ ಆದೇಶಕ್ಕೆ ಕ್ಯಾರೆ ಎನ್ನದೆ ದರ ಏರಿಸಿಕೊಂಡಿದೆ.
ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ಗಳಲ್ಲಿ ತೆರಳುವವರು ಡಬಲ್ ರೇಟ್, ತ್ರಿಬಲ್ ರೇಟ್ ನೀಡಿ ಊರಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದರದ ವಿವರ:
ಬೆಂಗಳೂರು-ಮಡಿಕೇರಿ
ಸಾಮಾನ್ಯ ದಿನದ ದರ ₹500- ₹600
ಅಕ್ಟೋಬರ್ 29, 30 ಟಿಕೆಟ್ ದರ
₹1000- ₹2000
ಬೆಂಗಳೂರು – ಉಡುಪಿ
ಸಾಮಾನ್ಯ ದಿನದ ದರ ₹600- ₹950
ಅಕ್ಟೋಬರ್ 29, 30 ಟಿಕೆಟ್ ದರ
₹1700-₹3000
ಬೆಂಗಳೂರು-ಧಾರವಾಡ
ಸಾಮಾನ್ಯ ದಿನದ ದರ ₹800 ₹1200
ಅಕ್ಟೋಬರ್ 29, 30 ಟಿಕೆಟ್ ದರ
₹1700-₹2300
ಬೆಂಗಳೂರು-ಬೆಳಗಾವಿ
ಸಾಮಾನ್ಯ ದಿನದ ದರ ₹1000 ₹1200
ಅಕ್ಟೋಬರ್ 29, 30 ಟಿಕೆಟ್ ದರ
₹1700-₹2500
ಬೆಂಗಳೂರು-ದಾವಣಗೆರೆ
ಸಾಮಾನ್ಯ ದಿನದ ದರ ₹600 ₹800
ಅಕ್ಟೋಬರ್ 29, 30 ಟಿಕೆಟ್ ದರ
₹1300-₹1700
ಬೆಂಗಳೂರು- ಚಿಕ್ಕಮಗಳೂರು
ಸಾಮಾನ್ಯ ದಿನದ ದರ ₹550 ₹600
ಅಕ್ಟೋಬರ್ 29, 30 ಟಿಕೆಟ್ ದರ
₹1100-₹1500
ಬೆಂಗಳೂರು – ಬೀದರ್
ಸಾಮಾನ್ಯ ದಿನದ ದರ ₹1000 ₹1300
ಅಕ್ಟೋಬರ್ 29, 30 ಟಿಕೆಟ್ ದರ
₹2000-₹2800
ಬೆಂಗಳೂರು – ರಾಯಚೂರು
ಸಾಮಾನ್ಯ ದಿನದ ದರ ₹600 ₹900
ಅಕ್ಟೋಬರ್ 29, 30 ಟಿಕೆಟ್ ದರ
₹1400-₹2000
ಬೆಂಗಳೂರು-ಶಿವಮೊಗ್ಗ
ಸಾಮಾನ್ಯ ದಿನದ ದರ ₹500-₹800
ಅಕ್ಟೋಬರ್ 29, 30
ಟಿಕೆಟ್ ದರ ₹1300- ₹2300
ಬೆಂಗಳೂರು- ಹುಬ್ಬಳಿ
ಸಾಮಾನ್ಯ ದಿನದ ದರ ₹1000- ₹1200
ಅಕ್ಟೋಬರ್ 29, 30
ಟಿಕೆಟ್ ದರ
₹1800-₹2500
ಬೆಂಗಳೂರು-ಮಂಗಳೂರು
ಸಾಮಾನ್ಯ ದಿನದ ದರ ₹600- ₹1000
ಅಕ್ಟೋಬರ್ 29, 30
₹1700- ₹2200/3000
ಬೆಂಗಳೂರು-ಕಲಬುರುಗಿ
ಸಾಮಾನ್ಯ ದಿನದ ದರ ₹1000- ₹1300
ಅಕ್ಟೋಬರ್ 29, 30 ಟಿಕೆಟ್ ದರ
₹1800-₹2500