ಪುತ್ತೂರು: ಜಮೀನು ವಿಚಾರಕ್ಕೆ ಸಂಬಂಧಿಸಿ ಬನ್ನೂರು ಮಾಯಿದೆ ದೇವುಸ್ ಆಡಳಿತ ಮಂಡಳಿ ಹಾಗೂ ಖಾಸಗಿ ವ್ಯಕ್ತಿಗಳ ನಡುವೆ ನಡೆದ ಮಾತಿನ ಚಕಮಕಿ, ಜೀವ ಬೆದರಿಕೆಯೊಡ್ಡಿರುವ ಘಟನೆಗೆ ಸಂಬಂಧಿಸಿ ಇತ್ತಂಡದ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಯಿದೆ ದೇವುಸ್ ಚರ್ಚ್ನ ಆಡಳಿತ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಆಸ್ಟಿನ್ ಡಿಕೊಸ್ತ ಅವರು ನೀಡಿದ ದೂರಿನಂತೆ ಚರ್ಚ್ಗೆ ಸಂಬಂಧಿಸಿ ಬನ್ನೂರು ಗ್ರಾಮದ ಸರ್ವೆ . 69/1AP1 2.48 2, 710 1 25, 2 145/1A 00.52 25, ಒಟ್ಟು 4 ಎಕ್ರೆ ಜಮೀನಿಗೆ ಅ.31 ರಂದು ಬೆಳಿಗ್ಗೆ ಮೌರಿಸ್ ಗೊನ್ಸಾಲ್ವಿಸ್, ವಿಕ್ಟರ್ ಗೊನ್ಸಾಲ್ವಿಸ್, ದೀಕ್ಷಿತ್, ಧೀರಜ್ ಗೊನ್ಸಾಲ್ವಿಸ್, ಬೀನಾ ಗೊನ್ಸಾಲ್ವಿಸ್ರವರು ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿದ್ದ ಕೃಷಿ ಹಾಗೂ ಬೇಲಿಯನ್ನು ನಾಶ ಮಾಡಿದಲ್ಲದೆ ಈ ಕುರಿತು ವಿಚಾರಿಸಿದಾಗ ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಬನ್ನೂರು ಮೌರಿಸ್ ಗೋನ್ಸಾಲ್ವಿಸ್ ಅವರು ಪ್ರತಿ ದೂರು ನೀಡಿದ್ದು, ಅ.31ರಂದು ಬೆಳಿಗ್ಗೆ ನಮ್ಮ ಮನೆಗೆ ಲಾರೆನ್ಸ್ ಮಸ್ಕರೇನಸ್, ಜೆರಾಲ್ಡ್, ಝೂ ಡಿಸೋಜ, ಜೆ ಪಿ ರೋಡ್ರಿಗಸ್, ರಿಚರ್ಡ್, ರೋಶನ್, ಜೀವನ್, ಬೊನವೆಂಚರ್ ಬಲ್ನಾಡು ಸಹಿತ ಹಲವು ಮಂದಿ ಕತ್ತಿ, ದೊಣ್ಣೆ ಮತ್ತು ವಿವಿಧ ಆಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿ ನನ್ನನ್ನು ತ ಕೊಲೆ ಮಾಡುವುದಾಗಿ ಬೆದರಿಸಿ ಮನೆಯಂಗಳದಲ್ಲಿದ್ದ ಅಡಿಕೆ ಒಣಗಿಸುವ ಸೋಲಾರ್ ನಾಶ ಮಾಡಿ, ನಮ್ಮ ಜಾಗಕ್ಕೆ ಅಕ್ರಮವಾಗಿ ಕಾಂಕ್ರೀಟ್ ಬೇಲಿಯನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಇತ್ತಂಡದವರ ದೂರು ದಾಖಲಿಸಿಕೊಂಡಿದ್ದಾರೆ