ಮಂಗಳೂರು: ನೇತ್ರಾವತಿ ಸೇತುವೆಯ ಮಹಾಕಾಳಿ ಪಡ್ಪು ಬಳಿ ದ್ವಿಚಕ್ರ ವಾಹನ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಮೊಹಮ್ಮದ್ ಶಾಕಿರ್ ಎಂಬುವರು ಬೈಕ್ ಚಲಾಯಿಸುತ್ತಿದ್ದರು, ಸಲ್ಮಾನ್ ಫರೀಶ್ ಅವರು ಸಹ ಸವಾರರು ಆಗಿದ್ದರು.
ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಘಟನೆ ಪರಿಣಾಮ ಸಲ್ಮಾನ್ ಫರೀಶ್ ಅವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೊಹಮ್ಮದ್ ಶಾಕಿರ್ ಗಾಯಗೊಂಡಿದ್ದು, ಪ್ರಸ್ತುತ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.