ಪುತ್ತೂರು : ಹೆಸರಾಂತ ಕಿಯಾ ಕಾರುಗಳ ಮಾರಾಟ ,ಸೇವಾ ಸಂಸ್ಥೆ ಮಂಗಳೂರಿನ ಎ.ಆರ್.ಎಂ. ಕಿಯಾ ತನ್ನ ಗ್ರಾಹಕರಿಗೆ ಶೀಘ್ರ ಮತ್ತು ತ್ವರಿತ ರೀತಿಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ಒದಗಿಸೋ ಸಲುವಾಗಿ ಪುತ್ತೂರಿನಲ್ಲೂ ಶಾಖೆ ಪ್ರಾರಂಭಿಸಲು ತೀರ್ಮಾನಿಸಿದ್ದು , ನ.8 ರಂದು ಇಲ್ಲಿನ ಮುಕ್ರಂಪಾಡಿ ಬಳಿ ನೂತನ ಮಳಿಗೆಯ ಕಾಮಗಾರಿ ಆರಂಭಿಸಲು ಭೂಮಿ ಪೂಜಾ ಕಾರ್ಯಕ್ರಮ ಮೂಲಕ ಚಾಲನೆ ನೀಡಲಾಯಿತು.
ಎ.ಆರ್.ಎಂ. ಕಿಯಾ ಇದರ ಆಡಳಿತ ನಿರ್ದೇಶಕರುಗಳಾದ ಆರೂರ್ ಗಣೇಶ್ ರಾವ್ ,ಆರೂರ್ ವಿಕ್ರಂ ರಾವ್ ಮತ್ತು ಆರೂರ್ ವರುಣ್ ಸಹಿತ ಜನರಲ್ ಮ್ಯಾನೇಜರ್ ನಿತಿನ್ ಕೃಷ್ಣ (ಸೇಲ್ಸ್) , ಜನರಲ್ ಮ್ಯಾನೇಜರ್ (ಸರ್ವೀಸ್) ಶಶಿ ಕುಮಾರ್ ಉಡುಪಿ , ಎ.ಜಿ.ಎಂ ಕನಕ ಕುಮಾರ್ , ಸರೋಶ್ ಮತ್ತು ವಿಶಾಲ್ ಹಾಗೂ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಗಿರಿಧರ್ ಎಂ. ಶೆಟ್ಟಿ ದಂಪತಿ , ಸೂರಾಜ್ ಎಂ.ಶೆಟ್ಟಿ ದಂಪತಿ , ಸುಶಾಂತ್ ಎಂ. ಶೆಟ್ಟಿ ಸಹಿತ ಹಲವರು ಹಾಜರಿದ್ದರು.