ಪುತ್ತೂರು: ಪುತ್ತೂರು ನಗರದ ಬಪ್ಪಳಿಗೆಯ ಸಿಂಗಾಣಿಯ ಜನತಾ ಕಲೋನಿಯಲ್ಲಿ ಪ್ಲಾಸ್ಟಿಕ್ ಗುಡಿಸಲಿನಲ್ಲಿ ಬಡ ಕುಟುಂಬವೊಂದು ವಾಸಿಸುತ್ತಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪುತ್ತೂರು ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ಪುಡಾ ಅಧ್ಯಕ್ಷರು ಭಾಮಿ ಅಶೋಕ್ ಶೆಣೈ, ಬಜರಂಗದಳ ಪುತ್ತೂರು ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್,ವಿನಾಯಕ ಫ್ರೆಂಡ್ಸ್ ಬಲ್ನಾಡು ಇದರ ಅಧ್ಯಕ್ಷ ಶರತ್ ಮುದಲಾಜೆ ಹಾಗೂ ಪ್ರಮುಖರಾದ ಭರತ್ ಚನಿಲ ಭೇಟಿ ನೀಡಿದರು.
ಪುತ್ತೂರು ನಗರ ಸಭಾ ಅಧ್ಯಕ್ಷರಾದ ಜೀವಂಧರ್ ಜೈನ್ ಇವರು ತುರ್ತಾಗಿ ತಾತ್ಕಾಲಿಕ ಮನೆ ನಿರ್ಮಾಣ ಹಾಗೂ ಮುಂದಿನ ದಿನಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಕೊಡುವುದಾಗಿ ಭರವಸೆ ನೀಡಿದರು.






























