25 ವರ್ಷ ವಯಸ್ಸಿನ ಎಸ್ ಡಿ ಎಂ ವಿದ್ಯಾ ಸಂಸ್ಥೆಯಲ್ಲಿ ಅತ್ಯುತ್ತಮ ಕ್ರೀಡಾಪಟು ಆಗಿದ್ದ ವರುಣ್ ಸ್ಥಿತಿ ಚಿಂತಾಜನಕವಾಗಿದೆ.
ಮೈಲಾಯ್ಡ್ ಲ್ಯುಕೋಮಿಯ ಅನ್ನುವ ಘೋರ ಸಮಸ್ಯೆಯಿಂದ ಬಳಲುತ್ತಿರುವ ವರುಣ್ ಪರಿಸ್ಥಿತಿ ಕಂಡರೆ ಕಣ್ಣಂಚು ತೇವವಾಗುವಂತಿದೆ.

ಅಂತರರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಪಟು ಆಗಿರುವ ವರುಣ್ ಜೀವನದಲ್ಲಿ ನೂರಾರು ಕನಸುಗಳನ್ನು ಕಟ್ಟಿಕೊಂಡು ಬಂದಿದ್ದು ಈಗ ಇವೆಲ್ಲವೂ ನುಚ್ಚು ನೂರಾಗಬಾರದು.. ಕಂಡ ಕನಸುಗಳ ಸಾಕಾರಕ್ಕಾಗಿ ನೆರವಿನ ಕೈಗಳ ಅಗತ್ಯ ಬಹಳವಿದೆ..

ಈಗಾಗಲೇ ಚಿಕಿತ್ಸೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದು ಇವರ ಚಿಕಿತ್ಸೆಗಾಗಿ ಮತ್ತಷ್ಟು ವೆಚ್ಚವನ್ನು ಭರಿಸಲು ಸಹಕರಿಸುವ ದಾನಿಗಳ ನಿರೀಕ್ಷೆಯಲ್ಲಿದೆ ಈ ಬಡಕುಟುಂಬ…ತಂದೆ ತಾಯಿಗೂ ಇರುವ ಒಬ್ಬ ಮಗನೇ ಆಸರೆ ಕೂಡ.. ಆದರೆ ಇದೀಗ ಈ ಎಳೆಯ ಯುವಕನ ಜೀವವೇ ಸಂಕಷ್ಟದಲ್ಲಿದೆ.. ಆಸ್ಪತ್ರೆಯಲ್ಲಿ ಚಿಕಿತ್ಸೆಯ ಹಂಬಲದಲ್ಲಿ ಇತ್ತ ಮನೆಯ ಆರ್ಥಿಕ ಪರಿಸ್ಥಿತಿ ಕೈ ಕಟ್ಟುವಂತೆ ಮಾಡಿ ಬಿಟ್ಟಿದೆ.
ಇಂತಹ ಕಠಿಣ ಸಂದರ್ಭದಲ್ಲಿ ವರುಣ್ ಗೆ ಬಂದೊದಗಿರುವ ಸಮಸ್ಯೆಯ ಚಿಕಿತ್ಸೆಗಾಗಿ ದಾನಿಗಳು ಧನಸಹಾಯ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
ಈ ಕೆಳಗಿನ ಮಾಹಿತಿಯ ಚಿತ್ರದಲ್ಲಿ ವರುಣ್ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ನೀಡಿದ್ದೇವೆ.. ಒಂದೇ ಕೋರಿಕೆ ದಾನಿಗಳು ನೆರವಾಗಿ
