ಸ್ಯಾಂಡಲ್‌ವುಡ್ ಇತಿಹಾಸದಲ್ಲಿ ಹಿಂದೊಮ್ಮೆ ಕ್ರೇಝಿ ಸ್ಟಾರ್ ರವಿಚಂದ್ರನ್ ಅಮೋಘ ಅಭಿನಯದ ರಾಮಾಚಾರಿ ಚಿತ್ರ, ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ರಾಮಾಚಾರಿ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದರ ಜತೆ ಜತೆಗೆ ಇತ್ತೀಚಿನ ವಿದ್ಯಮಾನಕ್ಕೆ ಸರಿ ಹೊಂದುವ0ತೆ ಯಶ್ ಮತ್ತು ರಾಧಿಕಾ ಪಂಡಿತ್ ಅಭಿನಯದ ಮಿ.ಮಿ.ರಾಮಾಚಾರಿ ಚಿತ್ರವೂ ಹೊರತಾಗಿಲ್ಲ.ಕನ್ನಡ ಚಂದನವನದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ಇದೀಗ ಇದರ ಬೆನ್ನಲ್ಲೇ ಮತ್ತೊಬ್ಬ ರಾಮಾಚಾರಿ ತೆರೆ ಮೇಲೆ ಬರಲು ಸಜ್ಜಾಗಿ ನಿಂತಿದ್ದಾನೆ. ಈ ರಾಮಾಚಾರಿ ಇನ್ನೇನೋ ಹೊಸ ರೂಪದಲ್ಲಿ ಕಾಣಿಸಲಿದ್ದಾನೆ. ಅದುವೇ ರಾಮಾಚಾರಿ 2.0

ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮವು ಸರಳವಾಗಿ ನಡೆದಿದ್ದು, ಡಿಸೆಂಬರ್ ಅಥವಾ ಜನವರಿ ವೇಳೆಗೆ ಚಿತ್ರೀಕರಣ ಆರಂಭಿಸುವ ಯೋಜನೆ ತಂಡದ್ದಾಗಿದೆ.
ಪನಾರೋಮಿಕ್ ಸ್ಟುಡಿಯೋದ ಸಹಯೋಗದಲ್ಲಿ ಮೇಗನಾ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ನಿರ್ದೇಶನ,ನಿರ್ಮಾಣ,ನಾಯಕನಾಗಿ ತೇಜ್ ಜವಾಬ್ದಾರಿ ಹೊತ್ತುಕೊಂಡಿದ್ದು, ಪುತ್ತೂರಿನ ಬೆಡಗಿ, ಗಿರಿಗಿಟ್ ಸಿನಿಮಾ ಮೂಲಕ ಕರಾವಳಿಯಲ್ಲಿ ಮನಮಾತಾದ ಶಿಲ್ಪಾ ಶೆಟ್ಟಿ ಮಾರ್ಗರೇಟ್ ಪಾತ್ರ ನಿರ್ವಹಿಸಲಿದ್ದು, ಸಂದೀಪ್ ಮಲಾನಿ, ಪ್ರಭು ಸೂರ್ಯ, ಸ್ಪರ್ಶ ರೇಖಾ, ಕೃಷ್ಣಮೂರ್ತಿ ಕವತಾರ್, ಆಶ್ವಿನ್ ಹಾಸನ್ ಸೇರಿ ಹಲವರ ತಾರಾಗಣ ಇಲ್ಲಿದೆ.

ವಿನಯ ಪಾಂಡವಪುರ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡುತ್ತಿದ್ದು, ಪ್ರೇಮ್ ಛಾಯಾಗ್ರಹಣ, ಸುಂದರ್ ಮೂರ್ತಿ ಸಂಗೀತ, ರಾಜೇಶ್ ಕೃಷ್ಣನ್,ಸಂತೋಷ್, ಈಶ್ವರ್ಯಾ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಲಿದ್ದಾರೆ.ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಶಶಾಂಕ್, ಮಹೇಶ್,ಪ್ರವೀಣ್ ನಾಯಕ್, ಫೈವ್ ಸ್ಟಾರ್ ಗಣೇಶ್ ಅತಿಥಿಗಳಾಗಿ ಆಗಮಿಸಿ, ಯುವಕರ ತಂಡಕ್ಕೆ ಶುಭ ಹಾರೈಸಿದರು.