ಪುತ್ತೂರು: ಅರಿಯಡ್ಕ ಹಾಗೂ ಕೆದಂಬಾಡಿ ಗ್ರಾ.ಪಂನಲ್ಲಿ ತೆರವಾದ ತಲಾ ಒಂದು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಎರಡು ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ಅರಿಯಡ್ಕ ಗ್ರಾ.ಪನಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿನಯ ಕುಮಾರ್ 433 ಮತ ಪಡೆದು 144 ಮತಗಳ ಅಂತರದಿಂದ ವಿನಯ ಕುಮಾರ್ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಹರೀಶ್ ಮಾಡನ್ನೂರು 289 ಮತ ಪಡೆದು ಪರಾಜಿತರಾಗಿದ್ದಾರೆ. 10 ಮತಗಳು ತಿರಸ್ಕೃತಗೊಂಡಿದೆ.
ಕೆದಂಬಾಡಿ ಗ್ರಾ.ಪಂನ ವಾರ್ಡ್-4 ರಲ್ಲಿ ಸಾಮಾನ್ಯ ಮೀಸಲು ಸ್ಥಾನದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮೆಲ್ವಿನ್ ಮೋಂತೆರೋ 272 ಮತ ಪಡೆದು 30 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಟಿ. ಮೋಹನ್ 242 ಹಾಗೂ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ರಫೀಕ್ ನಂಜೆ 108 ಮತಗಳನ್ನು ಪಡೆದುಕೊಂಡಿದ್ದಾರೆ. 11 ಮತ ತಿರಸ್ಕೃತಗೊಂಡಿದೆ.