ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ(RMSA)ವಿಟ್ಲ ಇಲ್ಲಿ ಎಂ.ಆರ್.ಪಿ. ಎಲ್ ನ CSR ಅನುದಾನದ ರೂ. 23.50ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ನೂತನ ವಾಚನಾಲಯ ಹಾಗೂ ಪ್ರಯೋಗಾಲಯ ಕೊಠಡಿಗಳನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಎಂ.ಆರ್ ಪಿ.ಎಲ್ ಸೀನಿಯರ್ ಮ್ಯಾನೇಜರ್ ಇನ್ ಮಾರ್ಕೆಟಿಂಗ್ ನ ದಯಾನಂದ ಪ್ರಭು ಉದ್ಘಾಟಸಿದರು. ಈ ಹಿಂದೆಯೂ ಈ ಸಂಸ್ಥೆಯಿಂದ ಶಾಲೆಗೆ ರೂಪಾಯಿ ಹತ್ತು ಲಕ್ಷ ಮೌಲ್ಯದ ಬಾಲಕರ ಶೌಚಾಲಯವೂ ನಿರ್ಮಾಣಗೊಂಡಿದ್ದು ಅದರ ಪ್ರಯೋಜನವನ್ನು ಮಕ್ಕಳು ಪಡೆಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಂ.ಆರ್.ಪಿ.ಎಲ್ ನ ಮ್ಯಾನೇಜರ್ ದಯಾನಂದ ಪ್ರಭು. ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಕರುಣಾಕರ ಗೌಡ ನಾಯ್ತೊಟ್ಟು ವಹಿಸಿದ್ದರು.
ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಸಂಗೀತ ಪಾಣೆಮಜಲು, ಪಟ್ಟಣ ಪಂಚಾಯತ್ ಕೌನ್ಸಿಲರ್ ರವಿಪ್ರಕಾಶ್ ವಿಟ್ಲ,ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ ಎಸ್ ಮಹಮ್ಮದ್, ಬಂಟ್ಟಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್ ಎಂ.ಜಿ, ವಿಟ್ಲ ಸಮೂಹ ನಂಪನ್ಮೂಲ ವ್ಯಕ್ತಿ ಬಿಂದು ಬಿ.ಜೆ. ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಾದ ರವಿಶಂಕರ ಶಾಸ್ತ್ರಿ, ರಶ್ಮಿ ಹರೀಶ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಫೆಲ್ಸಿಟಾ ಈವಾ ಗಲ್ಬಾವೊ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಮತಿ.ಕೆ, ಪ್ರಾಥಮಿಕ ಹಾಗೂ ಪ್ರೌಢ ವಿಭಾಗದ ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ಫೆಲ್ಸಿಟಾ ಈವಾ ಗಲ್ಬಾವೊ ಸ್ವಾಗತಿಸಿದರು, ಶ್ರೀಮತಿ.ಕೆ ವಂದಿಸಿದರು. ಪ್ರೌಢಶಾಲಾ ಸಹಶಿಕ್ಷಕರಾದ ಸದಾಶಿವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.