Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

    ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

    ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

    ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

    ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

    ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

    ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

    ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

    ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ

    ಪುತ್ತೂರಿನಲ್ಲಿ ಉದ್ಯೋಗಾವಕಾಶ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ರೆಂಜದಲ್ಲಿ ನೂತನ ರಿಕ್ಷಾ ತಂಗುದಾನ ಉದ್ಘಾಟನೆ : ಆಟೋ ಚಾಲಕರು, ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣು ಇದ್ದಂತೆ: ಅಶೋಕ್ ರೈ

January 15, 2025
in ಪುತ್ತೂರು
0
ರೆಂಜದಲ್ಲಿ ನೂತನ ರಿಕ್ಷಾ ತಂಗುದಾನ ಉದ್ಘಾಟನೆ : ಆಟೋ ಚಾಲಕರು, ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣು ಇದ್ದಂತೆ: ಅಶೋಕ್ ರೈ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು:ಆಟೋ ಚಾಲಕರು ಮತ್ತು ಸ್ವಚ್ಚತಾ ಕಾರ್ಮಿಕರು ಸಮಾಜದ ಎರಡು ಕಣ್ಣುಗಳಿದ್ದಂತೆ ಅವರು ಇಲ್ಲದೇ ಇರುವ ಅದು ಪರಿಪೂರ್ಣತೆಯನ್ನು ಹೊಂದಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.

Advertisement
Advertisement
Advertisement

ಅವರು ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ಶಾಸಕರ ಅನುದಾನದಿಂದ ನಿರ್ಮಾಣವಾದ ನೂತನ ರಿಕ್ಷಾ ತಂಗುದಾನವನ್ನು ಉದ್ಘಾಟಿಸಿ ಮಾತನಾಡಿದರು.

ಆಟೋ ಚಾಲಕರು ಸಂಕಷ್ಟದಲ್ಲಿ ನೆರವಿಗೆ ದಾವಿಸುವ ಆಪತ್ಬಾಂದವರಾದರೆ ಸ್ವಚ್ಚತಾ ಕಾರ್ಮಿಕರು ಜನರ ಆರೋಗ್ಯ ಕಾಪಾಡುವ ರಕ್ಷಕರು ಈ ಕಾರಣಕ್ಕೆ ಇವರನ್ನು ಸಮಾಜ ಯಾವತ್ತೂ ಅಗೌರವದಿಂದ ಕಾಣಬಾರದು. ಬೆಳಿಗ್ಗೆಯಿಂದ ರಾತ್ರಿ ತನಕ ತನ್ನ ಕುಟುಂಬವನ್ನು ಸಲಹುವ ಉದ್ದೇಶದಿಂದ ಬಿಸಿಲು ಮಳಗೆ ದುಡಿಯುತ್ತಿರುವ ಆಟೋ ಚಾಲಕರಿಗೆ ನೆರಳಿಗಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಗತ್ಯ ಇದ್ದ ಕಡೆ ತಂಗುದಾನ ನಿರ್ಮಾಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಟೋ ಚಾಲಕರಿಗೆ ತಂಗುದಾನದ ಬಳಿ ಶೌಚಾಲಯವನ್ನು ನಿರ್ಮಾಣ ಮಾಡುವ ಉದ್ದೇಶವಿರುವುದಾಗಿ ಶಾಸಕರು ಹೇಳಿದರು.

Advertisement

ರಿಕ್ಷಾ ಚಾಲಕರು ಕಚೇರಿಗೆ ಬನ್ನಿ :ವಿಧಾನಸಭಾ ಕ್ಷೇತ್ರದ ಪ್ರತೀಯೊಬ್ಬ ರಿಕ್ಷಾ ಚಾಲಕರೂ ತನ್ನ ಕಚೇರಿಗೆ ಬಂದು ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬೇಕು. ಶಾಸಕರ ಕಚೇರಿಯಲ್ಲಿ ಆಟೋ ಚಾಲಕರಿಗಾಗಿ ಉಚಿತ ಸೇವೆಯನ್ನು ಮಾಡಲಿದ್ದೇವೆ. ಕರ್ನಾಟಕದ ಕಾಂಗ್ರೆಸ್ ಸರಕಾರ ರಿಕ್ಷಾ ಚಾಲಕರನ್ನು ಕಾರ್ಮಿಕ ಇಲಾಖಾ ವ್ಯಾಪ್ತಿಗೊಳಪಡಿಸಿದ್ದರಿಂದ ಮುಂದಿನ ದಿನಗಳಲ್ಲಿ ಚಾಲಕರಿಗೆ ಸರಕಾರದಿಂದ ವಿವಿಧ ಸವಲತ್ತುಗಳೂ ದೊರೆಯಲಿದೆ ಎಂದು ಹೇಳಿದ ಶಾಸಕರು ಯಾರೊಬ್ಬರನ್ನೂ ಬಿಡದೆ ನನ್ನ ಕಚೇರಿಗೆ ಬಂದು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಕ್ಷೇತ್ರದ ಜನತೆಗೆ 1500 ನಿವೇಶನ ನೀಡುವೆ :ತನ್ನ ಕ್ಷೇತ್ರದಲ್ಲಿ ಕರೆಂಟ್ , ಮನೆ ಮತ್ತು ನಿವೇಶನವಿಲ್ಲದೆ ಯಾರೂ ಇರಬಾರದು. ಹೊಟ್ಟೆ ತುಂಬಾ ಊಟ ಮಾಡಿ ಮಲಗುವ ವಾತಾವರಣ ಸೃಷ್ಟಿಯಾಗಬೇಕು. ಜಾಗವೇ ಇಲ್ಲದವರನ್ನು ಗುರುತಿಸಿ ಅಂತವರಿಗೆ ಶೀಘ್ರದಲ್ಲೇ ಮನೆ ನಿವೇಶನವನ್ನು ನೀಡುತ್ತೇವೆ. ಈಗಾಗಲೇ ಎಂಟು ಗ್ರಾಮಗಳಲ್ಲಿ ನಿವೇಶನಕ್ಕ ಜಾಗಗುರುತಿಸಲಾಗಿದೆ, ನಿವೇಶನವಿಲ್ಲದವರು ಶಾಸಕರ ಕಚೇರಿಗೆ ಬಂದು ಮಾಹಿತಿ ಪಡೆದುಕೊಂಡು ಆಯಾ ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಾಸಕಲರು ಹೇಳಿದರು. ಗ್ರಾಮದ ಜನರಿಗೆ ಕುಡಿಯುವ ನೀರು ಕೊಡುವ ಉದ್ದೇಶದಿಂದ 1010 ಕೋಟಿ ನುದಾನವನ್ನು ತಂದಿದ್ದೇನೆ, ಕಾಮಗಾರಿ ಆರಂಭವಾಗಿದೆ ಎಂದ ಶಾಸಕರು ಪ್ರತೀ ಮನೆಗೂ ದಿನದ 24 ಗಂಟೆ ಶುದ್ದೀಕರಿಸಿದ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಾಸಕರು ಹೇಳಿದರು.

ಕ್ಷೇತ್ರದ ಜನರ ಕಣ್ಣೀರೊರೆಸುವೆ :ತನ್ನ ಕ್ಷೇತ್ರದ ಜನರ ಸೇವೆಗೆಂದೇ ನಾನು ಶಾಸಕನಾಗಿದ್ದೇನೆ, ನನಗೆ ಹಣ ಮಾಡಬೇಕೆಂಬ ಆಸೆಯಿಲ್ಲ, ಪುತ್ತೂರಿನಲ್ಲಿ ಬಡವರ ರಕ್ತ ಹೀರಲು ಬಿಡುವುದೇ ಇಲ್ಲ, ಕಚೇರಿಗಳಲ್ಲಿ ನಡೆಯುವ ಭೃಷ್ಟಾಚಾರಕ್ಕೆ ಬ್ರೇಕ್ ಹಾಕುವ ಕೆಲಸವನ್ನು ನಾನು ಮಾಡುತ್ತೇನೆ . ಜನತೆಯ ಬೆಂಬಲ ಸಿಕ್ಕಿದಲ್ಲಿ ಕ್ಷೇತ್ರವನ್ನು ಹೇಗೆ ಬೇಕೋ ಹಾಗೆ ಅಬಿವೃದ್ದಿ ಮಾಡಲು ಸಾಧ್ಯವಾಗುತ್ತದೆ. ನನ್ನ ಕ್ಷೇತ್ರದ ಜನರಿಗಾಗಿ ಎಲ್ಲಿಂದೆಲ್ಲಾ ಅನುದಾನ ತರಲು ಸಾಧ್ಯವೋ ಅಲ್ಲಿಂದೆಲ್ಲಾ ಅನುದಾನವನ್ನು ತರುತ್ತೇನೆ, ಅಭಿವೃದ್ದಿಯಲ್ಲಿ ರಾಜಕೀಯ ಮಾಡುವುದೇ ಇಲ್ಲ ಎಂದು ಶಾಸಕರು ಹೇಳಿದರು.

ಬಿಜೆಪಿ ಕಾರ್ಯಕರ್ತರು ಬರುತ್ತಿದ್ದಾರೆ :ಇಲ್ಲಿ ಬಿಜೆಪಿಯ ಶಾಸಕರಿದ್ದಾಗಲೂ ಬಿಜೆಪಿ ಕಾರ್ಯಕರ್ತರ ಕೆಲಸ ಆಗಿಲ್ಲ. ಬಹುತೇಕ ಬಿಜೆಪಿ ಕಾರ್ಯಕರ್ತರ 94 ಸಿ , ಅಕ್ರಮ ಸಕ್ರಮ ವನ್ನು ಮಾಜಿ ಶಾಸಕರು ಮಾಡಿಲ್ಲ. ಲಂಚ ಕೊಟ್ಟವರ ಕೆಲಸವನ್ನು ಮಾತ್ರ ಮಾಡಲಾಗಿದೆ. ಈ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರು, ಮುಖಂಡರು ನನ್ನ ಕಚೇರಿಗೆ ಬರುತ್ತಿದ್ದಾರೆ, ನನ್ನನ್ನು ಭೇಟಿಯಾಗುತ್ತಿದ್ದಾರೆ. ನನ್ನ ಸಹಾಯ ಕೇಳಿ ಬಂದವರನ್ನು ಪಕ್ಷ ಬೇದವಿಲ್ಲದೆ ಸಹಾಯ ಮಾಡುತ್ತಿದ್ದೇನೆ, ಶಾಸಕನಾದ ನಾನು ರಾಜಧರ್ಮ ಪಾಲಿಸುತ್ತಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಶಾಸಕರ ಕಾರ್ಯುವೈಖರಿ ಬಿಜೆಪಿಗರಿಗೂ ಅಚ್ಚರಿತಂದಿದೆ: ಕೆ ಪಿ ಆಳ್ವ

ಅಶೋಕ್ ರೈ ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ವೇಗತೆಯನ್ನು ಪಡೆದುಕೊಂಡಿದೆ. ಶಾಸಕರಾಗುವುದು ಕೇವಲ ರಾಜಕೀಯ ಮಾಡುವುದಕ್ಕಲ್ಲ ಎಂಬುದನ್ನು ಶಾಸಕರು ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲೂ ಎಲ್ಲೂ ಆಗದ ಅಕ್ರಮ ಸಕ್ರಮ ಕಡತ ವಿಲೇವಾರಿ ಪುತ್ತೂರಿನಲ್ಲಿ ನಡೆದಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಶಾಸಕರ ಅಭಿವೃದ್ದಿ ಕೆಲಸವನ್ನು ಮೆಚ್ಚಿ ಅನೇಕ ಮಂದಿ ಬಿಜೆಪಿ ಕಾರ್ಯಕರ್ತರು ಅಚ್ಚರಿಯನ್ನು ವ್ಯಕ್ತಪಡಿಸಿ ಶಾಸಕರಿಗೆ ಮನಸ್ಸಿದ್ದರೆ ಏನೂ ಮಾಡಬಹುದು ಎಂಬುದಕ್ಕೆ ಅಶೋಕ್ ರೈ ಸಾಕ್ಷಿ ಎಂದು ನನ್ನಲ್ಲಿ ಹೇಳುತ್ತಿರುವುದು , ಕಾಂಗ್ರೆಸ್ ಅಭಿವೃದ್ದಿ ಪರ ಎಂಬುದನ್ನೂ ಬಿಜೆಪಿಗರೂ ಒಪ್ಪಿಕೊಂಡಂತಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ ಹೇಳಿದರು.

ಚೆಲ್ಯಡ್ಕದಲ್ಲಿ ಸೇತುವೆಯಾಗಲು ಅಶೋಕ್ ರೈ ಬರಬೇಕಾಯಿತು: ನವೀನ್ ರೈ

ಕಳೆದ ೪೫ ಕ್ಕೂ ಹೆಚ್ಚು ವರ್ಷಗಳಿಂದ ಚೆಲ್ಯಡ್ಕದಲ್ಲಿ ಸೇತುವೆ ಮಾಡಬೇಕೆಂದು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದಾರೆ ಆದರೆ ಇದುವರೆಗೂ ನಮ್ಮ ಮನವಿಯನ್ನು ಯಾರೂ ಪರಿಗಣಿಸಿಲ್ಲ. ಶಾಸಕ ಅಶೋಕ್ ರೈ ಯವರು ಈ ಸೇತುವೆಯ ನಿರ್ಮಾಣಕ್ಕೆ ೩ ಕೋಟಿ ಅನುದಾನ ನೀಡಿದ್ದು ಕಾಮಗಾರಿ ಆರಂಭವಾಗಿದೆ ಚೆಲ್ಯಡ್ಕದಲ್ಲಿ ಸೇತುವೆಯಗಲು ಅಶೋಕ್ ರೈಗಳೇ ಶಾಸಕರಾಗಿ ಬರಬೇಕಾಯಿತು ಇದು ನಮ್ಮೆಲ್ಲರ ಭಾಗ್ಯವಾಗಿದೆ. ಬೆಟ್ಟಂಪಾಡಿ ಗ್ರಾಮಕ್ಕೆ ಅತೀ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ, ಗ್ರಾಪಂ ಉಪಾಧ್ಯಕ್ಷರಾದ ಮಹೇಶ್, ಸದಸ್ಯರಾದ ಮೊಯಿದುಕುಂಞಿ ಕೋನಡ್ಕ, ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಅಬೂಬಕ್ಕರ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಪಸ್ರಸಾದ್ ಪಾಣಾಜೆ, ಐತಪ್ಪ ಪೇರಲ್ತಡ್ಕ, ನಾರಾಯಣ ಹೊಳ್ಳ, ಗುತ್ತಿಗೆದಾರ ಸಿಯಾನ್ ದರ್ಬೆ,ಶ್ರಮಜೀವಿ ಆಟೋ ಚಾಲಕ ಮಾಲಕ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ವಲಯಕಾಂಗ್ರೆಸ್ ಅಧ್ಯಕ್ಷರಾದ ನವೀನ್ ಚೆಲ್ಯಡ್ಕ ಸ್ವಾಗತಿಸಿ, ಸಿದ್ದಿಕ್ ತಂಬುತ್ತಡ್ಕ ವಂದಿಸಿದರು.

Advertisement
Advertisement
Advertisement
Previous Post

ಪ್ರೇಯಸಿ ಜೊತೆಗೆ ಮನಸ್ತಾಪ – ಖಾಸಗಿ ವಿಡಿಯೋ ಹಂಚಿಕೊಂಡು ಯುವಕ‌ ಆತ್ಮಹತ್ಯೆ..!!

Next Post

ವಿವೇಕಾನಂದ ವಿದ್ಯಾರ್ಥಿಗಳಿಂದ ನೂತನ ಪ್ರಯತ್ನ..!!

OtherNews

ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!
Featured

ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

April 6, 2026
ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!
Featured

ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

April 5, 2026
ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!
Featured

ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

April 4, 2026
ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!
Featured

ದಾಖಲೆ ಬರೆದ ಜಾಯಿಂಟ್ ವೀಲ್: ಪುತ್ತೂರು ಜಾತ್ರೆಯಲ್ಲಿ 66 ಲಕ್ಷಕ್ಕೆ ಏಲಂ..!!

April 3, 2026
ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!
Featured

ವಿಟ್ಲ: ನೇಣು ಬೀಗಿದು ಯುವಕ ಆತ್ಮಹತ್ಯೆ..!!!

April 2, 2026
ದ.ಕ. ಜಿಲ್ಲಾ ಪಂಚಾಯತ್ ನಲ್ಲಿ ಉದ್ಯೋಗವಕಾಶ: (ಅ.10) ಅರ್ಜಿ ಸಲ್ಲಿಸಲು ಕೊನೆ ದಿನ
ಪುತ್ತೂರು

ಪುತ್ತೂರಿನಲ್ಲಿ ಉದ್ಯೋಗಾವಕಾಶ..!!

April 2, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

ಪುತ್ತೂರು ಮಹಾಲಿಂಗೇಶ್ವರ ಜಾತ್ರೋತ್ಸವ ಹಿನ್ನೆಲೆ: ಬಂಧಿತರಿಗೆ ಜಾಮೀನು ವಿಚಾರದಲ್ಲಿ ವಾದ ಮಾಡದಂತೆ ಮನವಿ..!!

April 6, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪ್ರೀತಿ ವಿಚಾರದಲ್ಲಿ ಮಹಿಳೆಯ ಮೇಲೆ ಹಲ್ಲೆ: ಜೀವ ಬೆದರಿಕೆ-ಪ್ರಕರಣ ದಾಖಲು..!!

April 6, 2026
ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ..!!

April 5, 2026
ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

ಪುತ್ತೂರು :ಕೇರಳ ಲಾಟರಿ ಮಾರಾಟ : ಪ್ರಕರಣ ದಾಖಲು..!!

April 4, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page