ಪುತ್ತೂರು : ಕೊರೊನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ನಿಂದ ತಮ್ಮ ವೃತ್ತಿಯೇ ಇಲ್ಲದೆ ಕಷ್ಟ ಪಡುತ್ತಿರುವ ಪುತ್ತೂರು ತಾಲೂಕಿನ ಅರ್ಹ ಕಲಾವಿದರನ್ನು ಹುಡುಕಿ ಅವರ ಸಂಕಷ್ಟವನ್ನು ಅರಿತು ಅಂತಹ ಕುಟುಂಬದವರನ್ನು ಭೇಟಿ ಮಾಡಿ ಅಕ್ಕಿ, ದಿನಸಿ ವಸ್ತುಗಳು, ತರಕಾರಿಗಳು ಹಾಗೂ ಪೌಷ್ಟಿಕ ಆಹಾರವನ್ನು ಪುತ್ತೂರಿನ “ಹೆಚ್.ಎಮ್. ಸಿ” ಜನಜಾಗೃತ್ ದಳ್ ಸಂಘಟನೆ ವತಿಯಿಂದ ವಿತರಿಸಲಾಯಿತು.
ಕಲಾವಿದರನ್ನು ಗುರುತಿಸಿ ಅವರಿಗೆ ಸಹಾಯ ಹಸ್ತ ನೀಡುವ ಮೂಲಕ ಹೆಚ್.ಎಮ್. ಸಿ ಜನಜಾಗೃತ್ ದಳ್ ಸಂಘಟನೆಯು ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಕಲಾವಿದರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಸಂಚಾಲಕರಾದ ರಝಾಕ್ ಬಪ್ಪಳಿಗೆ, ಸಹ ಸಂಚಾಲಕರಾದ ಭಾನುಪ್ರಕಾಶ್, ಸಲೀಂ ಬರೆಪ್ಪಾಡಿ, ದಾಮೋದರ್ ಹೆಗ್ಡೆ ಉಪಸ್ಥಿತರಿದ್ದರು.