ಮುಂಡೂರು : ಹೆಚ್ಚುತ್ತಿರುವ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಟ್ಟು 6 ಮನೆಗಳನ್ನು ಸೀಲ್ ಡೌನ್ ಮಾಡಲಾಯಿತು.
ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಳಿಂಗಹಿತ್ಲುವಿನ 1 ಮನೆ, ಅಂಬಟದ 1 ಮನೆ,ಕೂಡುರಸ್ತೆ 2 ಮನೆ,ನನ್ನವನದ 2 ಮನೆ ಸೇರಿದಂತೆ ಒಟ್ಟು 6 ಮನೆಗಳನ್ನು ಕೋವಿಡ್ ಹಿನ್ನೆಲೆಯಲ್ಲಿ ಸೀಲ್ಡೌನ್ ಮಾಡಲಾಯಿತು. ಸೀಲ್‌ಡೌನ್ ಮಾಡುವ ಸಂದರ್ಭದಲ್ಲಿ ಮೆಸ್ಕಾಂ ಎಇಇ ಶಿಲ್ಪಾ ಶೆಟ್ಟಿ, ಸಿಡಿಪಿಓ ಶ್ರೀಲತಾ, ಮುಂಡೂರು ಗ್ರಾ.ಪಂ ಕಾರ್ಯದರ್ಶಿ ಸುರೇಶ್ ನಾಯ್ಕ, ಸಿಬ್ಬಂದಿಗಳಾದ ದೇವಪ್ಪ ನಾಯ್ಕ ಕೇದಗೆದಡಿ ಹಾಗೂ ಕವಿತಾ ಉಪಸ್ಥಿತರಿದ್ದರು.
ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಳಗೊತ್ತಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಲಿದೆಯೇ ಎನ್ನುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ. ಈಗಾಗಲೇ ಮುಂಡೂರು ಗ್ರಾ.ಪಂ ವ್ಯಾಪ್ತಿಯಲ್ಲಿ 41 ಸಕ್ರಿಯ ಪ್ರಕರಣಗಳಿದ್ದು ಇದು ಇನ್ನಷ್ಟು ಹೆಚ್ಚಳವಾಗಲಿದೆಯೇ ಎನ್ನುವ ಆತಂಕ ಗ್ರಾಮದ ಜನರನ್ನು ಕಾಡುತ್ತಿದೆ. ಕೆಲವೇ ವಾರಗಳ ಮೊದಲು ಪಂಚಾಯತ್ ವ್ಯಾಪ್ತಿಯಲ್ಲಿ ಕೇವಲ 6 ಪಾಸಿಟಿವ್ ಕೇಸ್ ಮಾತ್ರ ಪತ್ತೆಯಾಗಿದ್ದು ಇದೀಗ ದಿಢೀರ್ ಏರಿಕೆಯಾಗಿದೆ.