ವಿಟ್ಲ : ಕಾರ್ಕಳ ಮಿಯ್ಯಾರುನಲ್ಲಿ ನಡೆದ ಜೋಡುಕೆರೆ ಕಂಬಳ ಕೂಟದ ನೇಗಿಲು ಹಿರಿಯ ವಿಭಾಗದಲ್ಲಿ (11.65) ದ್ವಿತೀಯ ಬಹುಮಾನವನ್ನು ಪಡೆದ ಕಿಶೋರ್ ಪೂಜಾರಿ ಕುಂಡಡ್ಕ ವಿಟ್ಲ ಇವರನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕುಂಡಡ್ಕ ಬೇರಿಕೆ ಇದರ ವತಿಯಿಂದ ಸನ್ಮಾನಿಸಲಾಯಿತು.

ಬುಧವಾರ ಸಂಘದ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಕುಂಡಡ್ಕ ಇದರ ಸ್ಥಾಪಕಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ, ಗೌರವಧ್ಯಕ್ಷರಾದ ದೇಜಪ್ಪ ಪೂಜಾರಿ ನಿಡ್ಯ, ಮಹಿಳಾ ಅಧ್ಯಕ್ಷರಾದ ಶ್ರೀಮತಿ ರೇಖಾ, ಗೌರವಧ್ಯಕ್ಷರಾದ ಶ್ರೀಮತಿ ಸುಮಾ ದೇಜಪ್ಪ, ನಿಕಟ ಪೂರ್ವ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಬಬಿತಾ ಉಮೇಶ್, ಕಾರ್ಯದರ್ಶಿ ಹರೀಶ್ ನೀರಕೋಡಿ, ಕೋಶಾಧಿಕಾರಿ ಲೋಹಿತ್ ಪಿಲಿಂಜ, ಚೆನ್ನಪ್ಪ ಪೂಜಾರಿ ಪಾದೆ, ನಾರಾಯಣ ಕಟ್ಟತ್ತಿಲ, ಕೃಷ್ಣಪ್ಪ ಪೂಜಾರಿ ಮರುವಾಳ, ಅಕ್ಷಯ್ ಮರುವಾಳ, ವಿಶ್ವನಾಥ್ ಪೂಜಾರಿ ಗುರ್ಜಿನಡ್ಕ, ಮೋಹನ್ ಮರುವಾಳ, ಚೇತನಾ ಮರುವಾಳ, ಸುನಿತಾ ಪಾದೆ,ಯೋಗಿತಾ ಕೆಮನಾಜೆ, ಚೇತನ್ ಕೆಮನಾಜೆ, ವೀರಪ್ಪ ಪಿಲಿಂಜ, ಶಶಿಧರ ಕಳುವಾಜೆ, ರಾಘವ ಪಿಲಿಪ್ಪೆ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.
