ಬಿಲ್ಲವ ಸಂಘ (ರಿ.) ವಿಟ್ಲ, ಬಿಲ್ಲವ ಮಹಿಳಾ ಘಟಕ ಮತ್ತು ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಸೋಮವಾರ ಸೇವಾಶ್ರಮ ( ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ ) ಬೆಳ್ಮ ದೇರಳಕಟ್ಟೆಯಲ್ಲಿ ವಿಶೇಷ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು ಮತ್ತು ಸೇವಾಶ್ರಮಕ್ಕೆ ಧನಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ಸಂಜೀವ ಪೂಜಾರಿ, ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ ಮರುವಾಳ, ಬಿಲ್ಲವ ಸಂಘ ವಿಟ್ಲ ಇದರ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಡಾ. ಗೀತಾಪ್ರಕಾಶ್, ಸಂಜೀವ ಪೂಜಾರಿ ಎಮ್ ಎಸ್ ,ಹರೀಶ್ ಸಿ ಹೆಚ್, ಯಶವಂತ ಪೂಜಾರಿ ನಿಡ್ಯ, ಬಿ ಕೆ ರವಿ, ಅಕ್ಷಯ್ ಮರುವಾಳ,ಹರ್ಷಿತ್ ವಿಟ್ಲ,ನಿರ್ಮಲ ಕಾರ್ಯಾಡಿ , ಪ್ರೇಮ ಉಕ್ಕುಡ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು