ಗದಗ: ಪ್ರೀತ್ಸೆ ಪ್ರೀತ್ಸೆ ಅಂತ ದುಂಬಾಲು, ಮದುವೆಯಾಗುವಂತೆ 47 ವರ್ಷದ ಅಂಕಲ್ 19 ವರ್ಷದ ಯುವತಿ ಹಿಂದೆಬಿದ್ದಿದ್ದು, ಇದೀಗ ಅಂಕಲ್ನ ಕಿರುಕುಳ ತಾಳಲಾರದೇ ಯುವತಿ ದುರಂತ ಸಾವು ಕಂಡಿದ್ದಾಳೆ. ಹೌದು…ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವೀರಾಪೂರ ತಾಂಡಾ ನಿವಾಸಿ ಕಿರಣ್ ಎನ್ನುವಾತ ಪ್ರೀತಿಸುವಂತೆ ಮಗಳ ವಯಸ್ಸಿನ ಯುವತಿ ಹಿಂದೆ ಬಿದ್ದು ಕಿರುಕುಳ ನೀಡಿದ್ದಾನೆ.
ಇದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಿರಣ ಕಳೆದ ಹಲವು ದಿನಗಳಿಂದ ವಂದನಾಗೆ ನಿತ್ಯ ಫೋನ್ ಮಾಡೋದು, ಮೆಸೇಜ್ ಮಾಡಿ, ಮದುವೆ ಆಗುವಂತೆ ಕಿರುಕುಳ ನೀಡುತ್ತಿದ್ದನಂತೆ. ಮದುವೆ ಆಗದಿದ್ದರೆ ಇಬ್ಬರ ಫೋಟೋ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಆತನ ಕಿರುಕುಳ ತಾಳಲಾರದೆ ವಂದನಾ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
47 ವರ್ಷದ ಕಿರಣ್ಗೆ ಎರಡು ಕಾಲು ಇಲ್ಲ. ಆದರೂ ತನ್ನ ವಯಸ್ಸು ಆ ಯುವತಿ ವಯಸ್ಸು ಏನು ಎನ್ನುವುದನ್ನು ಯೋಚಿಸಿದೇ ಪ್ರೀತ್ಸೆ ಪ್ರೀತ್ಸೆ ಎಂದು ದುಂಬಾಲು ಬಿದ್ದಿದ್ದಾನೆ. ಕಿರಣ್ನ ಕಿರುಕುಳ ತಾಳಲಾರದೇ ವಂದನಾ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಇದಕ್ಕೆ ಕಾರಣನಾದ ಕಿರಣ್ನಿಗೆ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಬೆಟಗೇರಿ ಪೊಲೀಸ್ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಕಿರಣ್ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ವಂದನಾ ಕುಟುಂಬಸ್ಥರು ಚಿಕ್ಕದೊಂದು ಬೀಡಿ ಶಾಪ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಅದೇ ತಾಂಡಾದಲ್ಲಿ ಕಿರಣ್ ವಾಟರ್ ಮ್ಯಾನ್ ಕೆಲಸ ಮಾಡುತ್ತಿದ್ದ. ಆದ್ರೆ, ಕಳೆದ ಒಂದು ವರ್ಷದ ಹಿಂದೆ ಕಿರಣ್, ವಂದನಾ ಜೊತೆಗೆ ಮದುವೆ ಮಾಡಿಕೊಂಡಿ ಎಂದು ಕುಟುಂಬಸ್ಥರನ್ನು ಕೇಳದ್ದನಂತೆ ಆಗ ವಯಸ್ಸಿನ ಅಂತರ ಹಾಗೂ ಕಿರಣ ವಿಶೇಷ ಚೇತನ ಇರೋದರಿಂದ ಮದುವೆಗೆ ಮೃತಳ ಕುಟುಂಬಸ್ಥರು ವಿರೋಧ ಮಾಡಿದ್ದರು. ಆಗ ಸುಮ್ಮನಾಗದ ಕಿರಣ ಪುನಃ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.




























