ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಡೆವಿಲ್ ಚಿತ್ರದ ಬಿಡುಗಡೆ ಪ್ರಯುಕ್ತ, ಡಿಬಾಸ್ ಅಭಿಮಾನಿ ಬಳಗ ಪುತ್ತೂರು ವತಿಯಿಂದ ಸಮಾಜಮುಖಿ ಕಾರ್ಯಕ್ರಮವೊಂದು ನೆರವೇರಿತು.
ಪ್ರಜ್ಞಾ ಆಶ್ರಮ, ಪುತ್ತೂರು ಅವರಿಗೆ ಅಗತ್ಯ ವಸ್ತುಗಳಾದ ಯೋಗ ಮ್ಯಾಟ್ ಮತ್ತು ಪಾತ್ರೆಗಳು ಅಭಿಮಾನಿಗಳಿಂದ ಹಸ್ತಾಂತರಿಸಲಾಯಿತು.
ಸಿನಿಮಾ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಜೋಡಿಸಿರುವ ಡಿಬಾಸ್ ಅಭಿಮಾನಿಗಳ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
























