ಪುತ್ತೂರು: ಶೈನಿಂಗ್ ಸ್ಟಾರ್, ಕರ್ಮಲ ಪುತ್ತೂರು ಇದರ ಆಶ್ರಯದಲ್ಲಿ ದ್ವಿತೀಯ ವರ್ಷದ ಕ್ರಿಕೆಟ್ ಲೀಗ್ ಪಂದ್ಯಾವಳಿ ‘ಸ್ನೇಹ ಸಮ್ಮಿಲನ ಚಾಂಪಿಯನ್ಸ್ ಲೀಗ್ 2026’ ಇದೇ ಬರುವ ಮಾರ್ಚ್ 22ರಂದು (ಆದಿತ್ಯವಾರ) ಪುತ್ತೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.
ಪಂದ್ಯಾಟದಲ್ಲಿ ಪುತ್ತೂರು, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನ ಆಯ್ದ 8 ತಂಡಗಳು ಭಾಗವಹಿಸಲಿವೆ. ಈ ಪಂದ್ಯಾವಳಿಯ ಉದ್ಘಾಟಕರಾಗಿ ಸಮಾಜಸೇವಕ ಶ್ರೀ ಅರುಣ್ ಕುಮಾರ್ ಪುತ್ತಿಲ ಅವರು ಭಾಗವಹಿಸಿ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.
ಪಂದ್ಯಾಟವು ಲೀಗ್ ಹಾಗೂ ನಾಕ್ಔಟ್ ಹಂತಗಳನ್ನು ಒಳಗೊಂಡಿರಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ವಹಿಸಲಿದ್ದಾರೆ.
ಅತಿಥಿಗಳಾಗಿ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಅಮಳ ರಾಮಚಂದ್ರ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕ್ರಿಷ್ಣ ಪ್ರಸಾದ್ ಆಳ್ವ, ಪುತ್ತೂರು ನಗರಸಭೆ ಸದಸ್ಯರಾದ ಶ್ರೀ ರಿಯಾಜ್ ಪರ್ಲಡ್ಕ, ‘ಅಮರ್ ಅಕ್ಟರ್ ಅಂಥೋನಿ ಸೌಹಾರ್ದ ರೋಲಿಂಗ್ ಟ್ರೋಫಿ’ ಆಯೋಜಕರಾದ ಶ್ರೀ ರಜಾಕ್ ಬಪ್ಪಳಿಗೆ ಅವರು ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮೆಸ್ಕಾಂ ಉಕ್ಕುಡ ಶಾಖಾಧಿಕಾರಿ (ವಿ) ಶ್ರೀ ಆನಂದ ಎಂ., ನ್ಯಾಯಾಂಗ ಇಲಾಖೆ ಪುತ್ತೂರುದ ಶ್ರೀ ವಿನೋದ ಕರ್ಮಲ, ಎಂ/ಎಸ್ ಎನ್.ಎಂ.ಪಿ.ಎ ಸಂಸ್ಥೆಯ ಪ್ರಾಜೆಕ್ಟ್ ಎಂಜಿನಿಯರ್ ಸುನೀಲ್ ಪಿ.ಕೆ., ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಪಳ್ನೀರ್ ಮಂಗಳೂರು ಜಾರಿ ಅಧಿಕಾರಿ ಶ್ರೀ ಹೆಚ್.ಡಿ. ಗಂಗಾಧರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಪಂದ್ಯಾಟದ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























