ಪುತ್ತೂರು : 110/33/11 ಕೆವಿ ಪುತ್ತೂರು ವಿದ್ಯುತ್ ವಿತರಣಾ ಕೇಂದ್ರದ ತುರ್ತು ಕಾಮಗಾರಿ ನಿಮಿತ್ತ ಜು.8ರಂದು ಬೆಳಿಗ್ಗೆ 10ರಿಂದ ಅಪರಾಹ್ನ ೫ರವರೆಗೆ ಕೆದಿಲ, ಕಬಕ, ಕಾಂಚನ, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಉಪ್ಪಿನಂಗಡಿ ಓಲ್ಡ್ ಮತ್ತು ರಾಮಕುಂಜ ಫೀಡರ್‌ಗಳಿಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆ.ವಿ. ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.