ಪುತ್ತೂರು : ಮನೆಯೊಂದರ ಅರ್ಧ ಭಾಗ ಕುಸಿದು ಬಿದ್ದ ಘಟನೆ ಬಪ್ಪಳಿಗೆ ಕರ್ಕುಂಜ ದಲ್ಲಿ ಜೂ.14 ರಂದು ನಡೆದಿತ್ತು, ನಿನ್ನೆ ರಾತ್ರಿ ಸುರಿದ ಮಳೆಗೆ ಮನೆಯೂ ಮುಕ್ಕಾಲು ಭಾಗ ಕುಸಿದು ಬಿದ್ದಿದೆ.
ಬಪ್ಪಳಿಗೆ ಕರ್ಕುಂಜ ನಿವಾಸಿ ಇಸ್ಮಾಯಿಲ್ ಎಂಬವರ ಮನೆಯು ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಅರ್ಧ ಭಾಗ ಕುಸಿದು ಬಿದ್ದಿದ್ದು, ನಿನ್ನೆ ತಡರಾತ್ರಿ ಮನೆಯ ಮುಕ್ಕಾಲು ಭಾಗ ನೆಲಸಮವಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ನಗರಸಭಾ ಹಿರಿಯ ಆರೋಗ್ಯಾಧಿಕಾರಿ ಶ್ವೇತಾ ಕಿರಣ್ ನಗರ ಸಭಾ ಸಿಬ್ಬಂದಿಗಳು,ವಾಹನ ಚಾಲಕ ರಾಧಾಕೃಷ್ಣ ತೆರಳಿ ರಸ್ತೆಗೆ ಬಿದ್ದಿದ್ದ ಕಲ್ಲುಗಳನ್ನು ತೆರವು ಗೊಳಿಸಿದರು…