ಪುತ್ತೂರು : ಧಾರಾಕಾರ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಮನೆಯೊಂದರ ಅರ್ಧ ಭಾಗ ಕುಸಿದು ಬಿದ್ದ ಘಟನೆ ಬಪ್ಪಳಿಗೆ ಕರ್ಕುಂಜ ದಲ್ಲಿ ಜೂ.14 ರಂದು ನಡೆದಿದೆ.
ಬಪ್ಪಳಿಗೆ ಕರ್ಕುಂಜ ನಿವಾಸಿ ಇಸ್ಮಾಯಿಲ್ ಎಂಬವರ ಮನೆಯು ಅರ್ದ ಕುಸಿದು ರಸ್ತೆಗೆ ಬಿದ್ದಿದ್ದು,ಇನ್ನೇನು ಸಂಪೂರ್ಣ ಮನೆ ರಸ್ತೆಗೆ ಬೀಳುವ ಪರಿಸ್ಥಿತಿ ಉಂಟಾಗಿದೆ. ಸದ್ಯ ಮನೆಯಲ್ಲಿ ಯಾರೂ ವಾಸ್ತವ್ಯ ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ವಿಷಯ ತಿಳಿದ ತಕ್ಷಣವೇ ನಗರ ಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಈ ಬಗ್ಗೆ ನಗರಸಭಾ ಪೌರಾಯುಕ್ತ ಮಧು ರವರು ಪ್ರತಿಕ್ರಿಯೆ ನೀಡಿದ್ದು, ಮನೆ ಮಾಲೀಕರಿಗೆ ಈಗಾಗಲೇ ವಿಷಯ ತಿಳಿಸಿದ್ದೇವೆ, ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಮನೆ ರಸ್ತೆಗೆ ಕುಸಿದು ಬೀಳುವ ಸ್ಥಿತಿಯಲ್ಲಿರುವುದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾಡಲಾಗುವುದು ಎಂದರು.
ಈ ಸಂದರ್ಭ ನಗರಸಭಾ ಪರಿಸರ ಅಭ್ಯಂತರರಾದ ಅರುಣ್ ಕುಮಾರ್, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ರಝಾಕ್ ಬಪ್ಪಳಿಗೆ,ನಗರಸಭಾ ಸಿಬ್ಬಂದಿಗಳು ಉಪಸ್ಥಿತರಿದ್ದರು.