ಬೆಂಗಳೂರು: ಸಂಚಾರಿ ವಿಜಯ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಮಧ್ಯಾಹ್ನ 1:15 ಕ್ಕೆ ಅಪೋಲೋ ಆಸ್ಪತ್ರೆ ಮತ್ತೊಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಸಂಚಾರಿ ವಿಜಯ್ ಅವರ ಸ್ಥಿತಿ ಗಂಭೀರವಾಗಿದೆ.. ಹೃದಯದ ಬಡಿತ ಇನ್ನೂ ಇದೆ..ಈಗಲೂ ಪ್ರಜ್ಞಾಹೀನರಾಗಿದ್ದಾರೆ ಎಂದಿದ್ದಾರೆ.
ಸಂಚಾರಿ ವಿಜಯ್ ಅವರ ಮೆದುಳು ನಿಷ್ಕ್ರಿಯವಾಗಿದ್ದರಿಂದ ಪ್ರಜ್ಞಾಹೀನವಾಗಿದ್ದಾರೆ. ಅವರ ಅಂಗಾಂಗಗಳನ್ನ ದಾನ ಮಾಡೋಕೆ ಕುಟುಂಬಸ್ಥರು ರೆಡಿ ಇದ್ದಾರೆ.. ಇದರ ಜೊತೆಗೆ ವಿಜಯ್ ಗೆ ಬೇಕಾದ ಎಲ್ಲಾ ಚಿಕಿತ್ಸೆ ನೀಡಲಾಗ್ತಿದೆ. ನಮ್ಮ ಕಡೆಯಿಂದ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎಂದು ಆಸ್ಪತ್ರೆ ಹೇಳಿದೆ.
ಅಪಘಾತದ ವೇಳೆ ಸಂಚಾರಿ ವಿಜಯ್ ಬ್ರೇನ್ ಹಾಗೂ ತೊಡೆಗೆ ತೀವ್ರ ಗಾಯಗಳಾಗಿತ್ತು. ತಕ್ಷಣ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ವಿಜಯ್ ಆಫರೇಶನ್ ಬಳಿಕ ಕೋಮಾಗೆ ಜಾರಿದ್ದು ಚೇತರಿಸಿಕೊಂಡಿಲ್ಲ.