ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜನಸಂಘದ ಸಕ್ರೀಯ ಕಾರ್ಯಕರ್ತ ಕಲ್ಲೇಗ ಸಂಜೀವ ಸಪಲ್ಯ(೭೫ವ) ರವರು ಜು.೯ ರಂದು ನೆಹರುನಗರ ಸಮೀಪದ ಅಜೇಯನಗರ ಸ್ವಗೃಹದಲ್ಲಿ ನಿಧನರಾದರು.
ಆರ್ ಎಸ್ ಎಸ್ ಮತ್ತು ಜನಸಂಘದ ಕಾಲದಲ್ಲಿ ಸಕ್ರಿಯರಾಗಿದ್ದ ಅವರು ಕಲ್ಲೇಗ ಶ್ರೀದೇವಿ ಭಜನಾ ಮಂಡಳಿ ಸ್ಥಾಪನೆ ವೇಳೆ ಪ್ರಮುಖ ಪಾತ್ರ ವಹಿಸಿದ್ದರು. ಕಲ್ಲೇಗ ದೈವಸ್ಥಾನದ ವಿವಿಧ ಚಟುವಟಿಕೆಯಲ್ಲೂ ಪಾತ್ರ ವಹಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಸಹಿತ ಹಲವಾರು ಮಂದಿ ಮೃತರ ಮನೆಗೆ ಭೇಟಿ ನೀಡಿದ್ದಾರೆ.