ಪುತ್ತೂರು: 2020-21 ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಆರುನೂರು ಅಂಕಗಳಿಗೆ ಆರುನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆಗೈದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ವಿಜ್ಞಾನ ವಿಭಾಗದಲ್ಲಿ ರಕ್ಷಿತಾ ಸಿ.ಪಿ( ಮಂಡ್ಯದ ಸಿ ಪ್ರಕಾಶ್ ಮತ್ತು ಸುಗುಣ ದಂಪತಿ ಪುತ್ರಿ), ಶಶಾಂಕ್ ಬಿ(ಕೆದಿಲದ ಸೀತರಾಮ ಭಟ್ ಮತ್ತು ಗಾಯತ್ರಿ ದಂಪತಿ ಪುತ್ರ),ಮನೋಜ್ ಎಸ್.ಆರ್( ಹೊಳೆನರಸೀಪುರದ ರಾಜಶೇಖರ ಮತ್ತು ಸಂದ್ಯಾರಾಣಿ ದಂಪತಿ ಪುತ್ರ), ಅವನೀಶ್ ಕೆ(ಕಬಕದ ಗೋಪಾಲಕೃಷ್ಣ ಭಟ್ ಮತ್ತು ಶೈಲಜಾ ದಂಪತಿ ಪುತ್ರ), ಚಿನ್ಮಯಿ(ವಿಟ್ಲದ ರಾಜನಾರಾಯಣ ಮತ್ತು ಗೀತಾ ದಂಪತಿ ಪುತ್ರಿ), ಅಪರ್ಣ ಬಾಳಿಗ ಎಂ(ಪೆರ್ಲದ ರಾಜರಾಮ ಬಾಳಿಗ ಮತ್ತು ರಾಜಶ್ರೀ ಬಾಳಿಗ ದಂಪತಿ ಪುತ್ರಿ), ಶ್ರೇಯಸ್ ಎಚ್(ಬನ್ನೂರಿನ ಆನಂದ ಗೌಡ ಎಚ್ ಮತ್ತು ಸವಿತಾ ದಂಪತಿ ಪುತ್ರ), ಶ್ರೀರಕ್ಷಾ ಬಿ(ಕಾಸರಗೋಡಿನ ಗಿರೀಶ ಮತ್ತು ವೀಣಾ ದಂಪತಿ ಪುತ್ರಿ), ಸಿಂಚನಾ ಲಕ್ಷ್ಮಿ(ಬಂಗಾರಡ್ಕದ ಮುರಳೀಧರ ಭಟ್ ಮತ್ತು ಶೋಭಾ ಬಿ ದಂಪತಿ ಪುತ್ರಿ), ಅಭಿಜ್ಞಾಲಕ್ಷ್ಮಿ(ಮೀಯಪದವಿನ ಶಿವಕುಮಾರ್ ಮತ್ತು ವಾಣಿಶ್ರೀ ದಂಪತಿ ಪುತ್ರಿ) ಆರು ನೂರು ಅಂಕಗಳಲ್ಲಿ ಆರುನೂರು ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದರು. ಪುತ್ತೂರು ಆಸುಪಾಸಿನ ವಿದ್ಯಾರ್ಥಿಗಳ ಮನೆಗೆ ತೆರಳಿ ಶಾಲು ಹೊದಿಸಿ, ಪುಸ್ತಕ ಮತ್ತು ಸಿಹಿ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀಧರ ಶೆಟ್ಟಿಗಾರ್, ಸುಪ್ರೀತ್, ವಿಶ್ವನಾಥ್ ,ಭೀಮ ಭಾರದ್ವಾಜ್, ಅಜಯ್ ಶಾಸ್ತ್ರಿ , ವಿದ್ಯಾರ್ಥಿಗಳ ಹೆತ್ತವರು, ಮತ್ತಿತರರು ಉಪಸ್ಥಿತರಿದ್ದರು.