ಉತ್ತರ ಕನ್ನಡ: ಶಿರಸಿಯ ಶಿರ್ಲೆ ಫಾಲ್ಸ್ ವ್ಯಾಪ್ತಿಯಲ್ಲಿ 6 ಪ್ರವಾಸಿಗರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ನವಗರದಿಂದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೆ ಫಾಲ್ಸ್ ಗೆ ಮೂರು ಬೈಕ್ನಲ್ಲಿ 6 ಪ್ರವಾಸಿಗರು ಬಂದಿದ್ದರು ಎನ್ನಲಾಗಿದ್ದು ಇವರಿಗಾಗಿ ತಡರಾತ್ರಿಯಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಆಶಿಪ್ ಡಲಾಯಿತ್, ಆಯಮ್ಮದ್ ಸೈಯದ್ ಶೇಖ್, ಅಬತಾಪ್ ಸದ್ದಾಂ ಶಿರಹಟ್ಟಿ, ಮಾಬುಸಾಬ್ ಮಕಬುಲಸಾಬ್ ಶಿರಹಟ್ಟಿ,ಶಾನು ಬಿಜಾಪುರಿ,ಇಪ್ತಿಯಾಜಿ ನಜೀರಸಾಬ್ ಮುಲ್ಲಾನವರ ನಾಪತ್ತೆಯಾದವರು.ಮೂರು ಬೈಕ್ನಲ್ಲಿ ಫಾಲ್ಸ್ ನೋಡಲು ಆಗಮಿಸಿದ್ದು, ಭಾರಿ ಮಳೆಯಿಂದಾಗಿ ಫಾಲ್ಸ್ ತುಂಬಿ ಹರಿಯುತ್ತಿದೆ. ಆದರೆ, ಫಾಲ್ಸ್ ವೀಕ್ಷಣೆ ವೇಳೆ 6 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.