ಸುಳ್ಯ: ಸುಳ್ಯದಿಂದ ಬುಲೆಟ್ ಬೈಕಿನಲ್ಲಿ ಯುವಕರಿಬ್ಬರು ಭಾರತದ ಹಲವಾರು ನಗರಗಳ ಮೂಲಕ ಕಾಶ್ಮೀರದ ಲಡಾಕ್ ತಲುಪಲಿರುವ ಸಾಹಸ ಪಯಣವನ್ನು ಸುಳ್ಯದ ಅಡಿಕೆ ಉದ್ಯಮಿಯಾದ ಅರ್ಷಾಕ್ ಗಾಂಧಿನಗರ ಮತ್ತು ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು ಅವರ ಎಂ.ಆರ್ ಗ್ರೂಪ್ ನ ಸದಸ್ಯ ರಮೀಝ್ ಶೈನ್ ಸುಳ್ಯ ರವರು ರಸ್ತೆಯ ಮೂಲಕ ಕೈಗೊಂಡಿದ್ದಾರೆ.
ಇವರ ಯಾತ್ರೆಯು ಸುಳ್ಯ, ಬೆಂಗಳೂರು, ಹೈದರಾಬಾದ್, ಮಹಾರಾಷ್ಟ್ರ, ರಾಜಾಸ್ಥಾನ, ಪಂಜಾಬ್, ಕಾಶ್ಮೀರದ ಶ್ರೀನಗರದ ಮುಖಾಂತರ ಲಡಾಕ್ ತಲುಪಿ ಅಲ್ಲಿಂದ ಕಾರ್ದುಂಗ್ಲಾ ಪಾಸ್, ಕುಲು, ಮನಾಲಿ, ದೆಹಲಿ, ಆಗ್ರಾ ತಲುಪಲಿದ್ದಾರೆ.
ಸುಮಾರು ಒಂದು ತಿಂಗಳ ಕಾಲದ ಈ ಯಾತ್ರೆಗೆ ಸುಳ್ಯ ಗಾಂಧಿನಗರದಿಂದ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ ಮತ್ತು ಉಮ್ಮರ್ ಕೆ.ಎಸ್ ರವರು ಚಾಲನೆ ನೀಡಿ, ಅರಂಬೂರಿನ ಕೆಫೆ ಕಾಫಿ ಡೇ ಬಳಿಯಿಂದ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು ಮತ್ತು ಸಾರ್ವಜನಿಕರು ಸೇರಿದ್ದರು.