ಪುತ್ತೂರು: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ ಯವರ ತಂಡ ನಗರ ಸಂಚಾರ ನಡೆಸಿ ನಗರ ಸಭೆಯು ಏಕಾಏಕಿ ಗೂಡಂಗಡಿಗಳ ವಿರುದ್ಧ ನಡೆಸಿರುವ ತೆರವು ಕಾರ್ಯಾಚರಣೆಯಿಂದ ಕಷ್ಟ ನಷ್ಟಕ್ಕೆ ಒಳಗಾಗಿರುವವರನ್ನು ಭೇಟಿಯಾಗಿ ಸಂತ್ರಸ್ತ ವ್ಯಾಪಾರಿ ಗಳಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ತೊಂದರೆಗೊಳಗಾದ ಸಂತ್ರಸ್ತರು ಬಡವರಿಗೆ ಅನ್ಯಾಯ ಮಾಡುತ್ತಿರುವ ನಗರ ಸಭಾ ಆಡಳಿತಕ್ಕೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವುದು ಕಂಡು ಬಂತು ಕೆಲವರು ಕಣ್ಣೀರು ಹಾಕುತ್ತಾ ಹೇಗೋ ಈ ಸಣ್ಣ ಅಂಗಡಿ ವ್ಯಾಪಾರ ನಂಬಿ ಬದುಕುತ್ತಿದ್ದೆವು, ಇನ್ನು ನಮಗೆ ಗತಿ ಏನೂ ಎಂದು ಅವಲತ್ತು ಕೊಳ್ಳುವ ದೃಶ್ಯ ಮನಮಿಡಿಯುವಂತಿದ್ದು, ಕಾಂಗ್ರೆಸ್ ನಾಯಕರು ನಿಮ್ಮ ಪರವಾಗಿ ನಾವಿದ್ದೇವೆ, ನಿಮಗಾದ ಅನ್ಯಾಯದ ವಿರುದ್ಧ ಹೋರಾಟಕ್ಕೆ ಹೊರಟಿದ್ದೇವೆ, ನಿಮಗೆ ತೊಂದರೆ ಕೊಟ್ಟ ವರನ್ನು ನಾವು ಸುಮ್ಮನೆ ಬಿಡೋದಿಲ್ಲ ನಿಮಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.