ಪುತ್ತೂರಿನ ಪೊಳ್ಯ ಸಮೀಪ ಬ್ಯಾರಿಕೇಡ್ ಬಳಿ ಅಪಘಾತಕ್ಕೆ ಒಳಗಾಗಿ ಮೃತರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಗ್ರಾಮ ವಿಕಾಸ ಪ್ರಮುಖರಾದ ಬಂಟ್ವಾಳ ನಿವಾಸಿ ವೆಂಕಟರಮಣ ಹೊಳ್ಳ ರವರ ಪಾರ್ಥಿವ ಶರೀರ ಪುತ್ತೂರು ಆಸ್ಪತ್ರೆಯಿಂದ ಬಿ.ಸಿ ರೋಡ್ ಗೆ ಆಗಮಿಸಿದ ವೇಳೆ ಬಿ.ಸಿ ರೋಡ್ ನ ಮುಖ್ಯ ವೃತ್ತದಿಂದ ಅವರ ನಿವಾಸ ಅಗ್ರಬೈಲು ವರೆಗೆ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಕೊಂಡೊಯ್ದು ಮೃತರಿಗೆ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಸಂಸದ ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.