ಪುತ್ತೂರು: ಕಬಕ ಸಮೀಪ ಪೊಳ್ಯ ದಲ್ಲಿ ಡಿ.15 ರಂದು ನಡೆದಿದ್ದ ಅಪಘಾತದಲ್ಲಿ ಬೈಕ್ ಸವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮ ವಿಕಾಸ್ ಮಂಗಳೂರು ವಿಭಾಗ ಪ್ರಮುಖ್ ವೆಂಕಟ್ರಮಣ ಹೊಳ್ಳ ಅವರು ಮೃತ ಪಟ್ಟ ಘಟನೆಗೆ ಸಂಬಂಧಿಸಿ ಅವರ ಬೈಕ್ ಗೆ ಡಿಕ್ಕಿ ಹೊಡೆದು ನಾಪತ್ತೆಯಾಗಿದ್ದ ಟಿಪ್ಪರ್ ಲಾರಿ ಯನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಸಂಚಾರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಅರಿಯಡ್ಕ ದ ದಿನೇಶ್ ಕುಮಾರ್ ಮಾಲಕತ್ವದ ಟಿಪ್ಪರ್ ಚಾಲಕ ಪಾಣಾಜೆ ನಿವಾಸಿ ಚರಣ್ ಕುಮಾರ್ ಬಂಧಿತ ಆರೋಪಿ. ಮರಳು ಲೋಡ್ ಗಾಗಿ ಮಂಗಳೂರು ಕಡೆ ತೆರಳುತ್ತಿದ್ದ ವೇಳೆ ಪೋಲ್ಯ ಸಮೀಪ ಅವರ ಟಿಪ್ಪರ್ ಬೈಕ್ ಗೆ ಡಿಕ್ಕಿ ಹೊಡೆದಿತ್ತು ಆದರೂ ಟಿಪ್ಪರ್ ನಿಲ್ಲಸದೆ ಪರಾರಿಯಾಗಿದ್ದರು.
ಅಪಘಾತದಲ್ಲಿ ಮೃತಪಟ್ಟ ವೆಂಕಟ್ರಮಣ ಹೊಳ್ಳ ಅವರ ತಲೆ ಬಾಗ ಜಜ್ಜಿ ಹೋಗಿದ್ದರಿಂದ ಬಲವಾದ ಸಂಶಯದ ಮೇಲೆ ಪುತ್ತೂರು ಸಂಚಾರಿ ಪೊಲೀಸರು ತನಿಖೆ ಕೈಗೆತ್ತಿಕೊಂಡದ್ದರು.ಘಟನೆಯು ನಸುಕಿನ ಜಾವ ನಡೆದದರಿಂದ ಸರಿಯಾದ ಬೆಳಕು ಇಲ್ಲದ ಹಿನ್ನಲೆ ಅಪಘಾತ ಎಸಗಿದ ವಾಹನವನ್ನು ಪತ್ತೆ ಹಚ್ಚಲು ತುಸು ಕಷ್ಟಕರವಾಗಿತ್ತು. ಸ್ಥಳೀಯ ಸಿಸಿ ಕ್ಯಾಮರಾ ಕಣ್ಣಿಗೆ ಟಿಪ್ಪರ್ ಗಳು ಹೋಗುವುದು ಕಂಡರೂ ಟಿಪ್ಪರ್ ಸಂಖ್ಯೆ ಸರಿಯಾಗಿ ಗೋಚರಿಸುತ್ತಿಲ್ಲ. ಆದರೆ ಮುಂದಿನ ರಸ್ತೆಯಲ್ಲಿ ಸಿಕ್ಕಿದ ಸಿಸಿ ಕ್ಯಾಮರಾ ದೃಶ್ಯಗಳಲ್ಲಿ ಟಿಪ್ಪರ್ ಗಳು ಒಂದರ ಹಿಂದೆ ಒಂದು ವೇಗವಾಗಿ ಹೋಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ನಡುವೆ ಟಿಪ್ಪರ್ ಜಿ ಪಿ ಎಸ್ ಮತ್ತು ಚಾಲಕನ ಮೊಬೈಲ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.