ಪುತ್ತೂರು: ಬಡ ಕುಟುಂಬದ ಮನೆಯೊಂದು ಈ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ಬಿದ್ದು ತಿಂಗಳು ಕಳೆದರೂ ಯಾವುದೇ ಜನಪ್ರತಿನಿಧಿಗಳಾಗಲಿ, ಅಧಿಕಾರಿ ವರ್ಗವಾಗಲಿ ಬಡ ಕುಟುಂಬದ ನೆರವಿಗೆ ಬಾರದೇ ಇದ್ದಾಗ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ, ಉದ್ಯಮಿ ಅಶೋಕ್ ಕುಮಾರ್ ರೈ ನೆರವಿನ ಹಸ್ತ ಚಾಚಿದ್ದಾರೆ.

ಪುತ್ತೂರು ತಾಲೂಕಿನ ಕೌಡಿಚ್ಚಾರ್ ಸಮೀಪದ ಮಡ್ಯಂಗಲದ ಜಗನ್ನಾಥ ಶೆಟ್ಟಿ ಹಾಗೂ ಮೋಹಿನಿ ದಂಪತಿಗಳ ಮನೆ ಮಳೆಗಾಲದಲ್ಲಿ ಸಂಪೂರ್ಣ ಕುಸಿದು ಹೋಗಿದ್ದು, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾರೂ ಕೂಡ ಸ್ಥಳ ವೀಕ್ಷಣೆಗೂ ಆಗಮಿಸಲಿಲ್ಲ ಎಂಬ ಆರೋಪ ಇದೆ ಎಂದು ಅಶೋಕ್ ರೈ ತಿಳಿಸಿದ್ದಾರೆ.

ಮನೆ ನಿರ್ಮಾಣದ ಬಗ್ಗೆ ಕನಸು ಕಾಣುತ್ತಿದ್ದ ಈ ಬಡ ಕುಟುಂಬದ ಬಗೆಗಿನ ಮಾಹಿತಿಯನ್ನು ಅಶೋಕ್ ಕುಮಾರ್ ರೈ ಅಭಿಮಾನಿಗಳು ಸಂಗ್ರಹಿಸಿದ್ದು, ಇದೀಗ ಅಶೋಕ್ ರೈ ಖುದ್ದು ಸ್ಥಳ ಪರಿಶಿಲೀಸಿದ್ದಾರೆ. ಆದಷ್ಟು ಶೀಘ್ರದಲ್ಲಿ ಮನೆ ನಿರ್ಮಿಸುವ ಭರವಸೆಯನ್ನು ನೀಡಿದ್ದಾರೆ.

