ನಿನ್ನೆ ರಾತ್ರಿ ಸುಮಾರು 9ಗಂಟೆಯಿಂದ ಜಗತ್ತಿನಾದ್ಯಂತ ವಾಟ್ಸ್ಌಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದರಿಂದ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಆ ಬಳಿಕ ಮುಂಜಾನೆ 4.30ರ ಸುಮಾರಿಗೆ ವಾಟ್ಸಾಪ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ಗಳು ತನ್ನ ದೋಷವನ್ನು ಸರಿಪಡಿಸಿಕೊಂಡು, ಮೊದಲಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ. ಈ ಬಗ್ಗೆ ವಾಟ್ಸ್ ಆ್ಯಪ್ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ಅಡಚಣೆಯಾಗಿದ್ದಕ್ಕೆ ಗ್ರಾಹಕರ ಬಳಿ ಕ್ಷಮೆಯಾಚಿಸಿದೆ.
ಇದರಿಂದ ಸೋಷಿಯಲ್ ಮೀಡಿಯಾ ಬಳಸುವ ಅಸಂಖ್ಯಾ ಜನರು ಪರದಾಡುವಂತಾಗಿತ್ತು, ಹಲವರು ತಮಗಾದ ಅನುಭವಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಈ ಅಪ್ಲಿಕೇಷನ್ಗಳು ವೆಬ್ ಅಥವಾ ಸ್ಮಾರ್ಟ್ಫೋನ್ಗಳಲ್ಲಿ ಕೂಡ ಕೆಲಸ ಮಾಡುತ್ತಿರಲಿಲ್ಲ ಈ ಸಮಸ್ಯೆ ಆಂಡ್ರಾಯ್ಡ್ ಹಾಗೂ ಐಒಎಸ್ ಮತ್ತು ವೆಬ್ ಮೂರರಲ್ಲೂ (Android, iOS) ಆಗಿದೆ ತಿಳಿದು ಬಂದಿದೆ.
ಮಾಹಿತಿ ಹಂಚಿಕೊಳ್ಳಲು ಹಾಗೂ ಸಂವಹನಕ್ಕೆ ಬಹುತೇಕ ಜನರು ಈಗ ವಾಟ್ಸಾಪ್ ಅವಲಂಬಿಸಿರುತ್ತಾರೆ. ಮನರಂಜನೆಗೆ ಖ್ಯಾತ ಸೋಷಿಯಲ್ ಮೀಡಿಯಾಗಳಾದ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಬಳಸುತ್ತಾರೆ. ಇದ್ಯಾವುದೂ ಕೆಲಸ ಮಾಡದ ಕಾರಣ ಜನ ತಲೆಕೆಡಿಸಿಕೊಳ್ಳುವಂತಾಗಿದ್ದು ಅಂತೂ ಸುಳ್ಳೇನಲ್ಲ…!!
ಸೇವೆ ಸ್ಥಗಿತ-ಸಾಲು ಸಾಲು ದೂರು:
ಇನ್ನು ಫೇಸ್ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಸೇವೆ ರಾತ್ರಿ 9ರ ಸುಮಾರಿಗೆ ಸೇವೆ ಸ್ಥಗಿತಗೊಳ್ಳುತ್ತಿದ್ದಂತೆ ಬಳಕೆದಾರರು ಶಾಕ್ಗೆ ಒಳಗಾಗಿಬಿಟ್ರು. ಕೂಡಲೇ ಬಳಕೆದಾರರು ಕಂಪನಿಗೆ ಸಾಲು ಸಾಲು ದೂರು ಕೊಡೋದಕ್ಕೆ ಶುರುಮಾಡಿದ್ರು. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ದೂರುಗಳು ಕಂಪನಿಗೆ ತಲುಪಿದ್ದವು. ಟ್ವಿಟ್ಟರ್ ಮೂಲಕ ಕಂಪನಿಗೆ ದೂರು ನೀಡಿದ ಬಳಕೆದಾರರಿಗೆ ಸ್ಪಂದಿಸಿದ ಕಂಪನಿ ಸಿಇಓ ಅಡಚಣೆಗಾಗಿ ಕ್ಷಮಿಸಿ ಅಂತಲೂ ಮನವಿ ಮಾಡಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳ ಸೇವೆಯಲ್ಲಿ ಕೆಲ ಸಮಯ ವ್ಯತಯ ಉಂಟಾಗಿದ್ದು, ಈ ಯಾವುದೇ ಸೇವೆಗಳಿಲ್ಲದೆ ಜನ ಕಂಗಾಲಾಗಿದ್ದು ಅಂತೂ ನೂರಕ್ಕೆ ನೂರು ನಿಜಾವಾಗಿದೆ. ಕೆಲ ಸಮಯದ ಬಳಿಕ ಎಲ್ಲವೂ ಮೊದಲಿನಂತಾಗಿದ್ದು, ಜನ ನಿಟ್ಟುಸಿರು ಬಿಡುತ್ತಾ ಮತ್ತೆ ತಮ್ಮ ಸಾಮಾಜಿಕ ಜಾಲತಾಣಗಳ ಲೋಕಕ್ಕೆ ಜಾರಿದ್ದಾರೆ.