ಸುಳ್ಯ: ಎಸ್ಐ ಎಂ.ಆರ್.ಹರೀಶ್ ವರ್ಗಾವಣೆಗೊಂಡಿದ್ದು, ಸುಳ್ಯ ಪೊಲೀಸ್ ಠಾಣೆಯ ನೂತನ ಎಸ್ಐ ಆಗಿ ದಿಲೀಪ್ ಜಿ.ಆರ್. ರವರು ಸೋಮವಾರ ಸಂಜೆ ಅಧಿಕಾರ ವಹಿಸಿಕೊಂಡರು.
ಹರೀಶ್ ಅವರನ್ನು ಸದ್ಯ ಪಶ್ಚಿಮ ವಲಯ ಐಜಿಪಿ ಕಚೇರಿಗೆ ನಿಯೋಜನೆ ಮಾಡಲಾಗಿದೆ. ಪಡುಬಿದ್ರೆ ಎಸ್ಐ ಆಗಿದ್ದ ದಿಲೀಪ್ ಜಿ.ಆರ್.ಅವರು ವರ್ಗಾವಣೆಯಾಗಿ ಸುಳ್ಯ ಠಾಣೆಗೆ ಬಂದಿದ್ದಾರೆ.
ಕಳೆದ ಎರಡು ವರ್ಷ 7 ತಿಂಗಳಿನಿಂದ ಸುಳ್ಯ ಠಾಣೆಯ ಎಸ್ಐ ಆಗಿದ್ದ ಹರೀಶ್ ಎಂ.ಆರ್.ಅವರು ನೇರ, ದಿಟ್ಟ ಹಾಗು ಜನಪರ ಅಧಿಕಾರಿ ಎಂಬ ಹೆಸರು ಗಳಿಸಿದ್ದರು. ಕೋವಿಡ್ ಮತ್ತು ಲಾಕ್ ಡೌನ್ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು.