ಪುತ್ತೂರು: ಹಿರಿಯ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರ “ಲಾ ಚೇಂಬರಿಗೆ” ಪುತ್ತೂರಿನ ಮಾಜಿ ಶಾಸಕರು, ಸಂಸದರು ಆಗಿದ್ದ ವಿನಯ್ ಕುಮಾರ್ ಸೊರಕೆ ಭೇಟಿ ನೀಡಿ,ಶುಭ ಹಾರೈಸಿದರು.
ನೂರುದ್ದೀನ್ ಸಾಲ್ಮರವರು ಇತ್ತೀಚೆಗೆ ಪುತ್ತೂರು ಪ್ರಧಾನ ರಸ್ತೆಯಲ್ಲಿದ್ದ ಎಸ್ಎಂ ಸಂಕೀರ್ಣದಿಂದ ಜುಮ್ಮಾ ಮಸ್ಜಿದ್ ಕಟ್ಟಡಕ್ಕೆ ತಮ್ಮ ಕಚೇರಿಯನ್ನು ಸ್ಥಳಾಂತರ ಗೊಳಿಸಿದ್ದರು. ಪುತ್ತೂರಿನಲ್ಲಿ ಸುಮಾರು 27 ವರ್ಷಗಳಿಂದ ನ್ಯಾಯವಾದಿಯಾಗಿ ಹಾಗೂ ನೋಟರಿಯಾಗಿ ಕಾರ್ಯನಿರ್ವಹಿಸುತ್ತಿರುವ ನೂರುದ್ದೀನ್ ಸಾಲ್ಮರ ರವರ ರಾಜಕೀಯ ಗುರುಗಳು ಹಿತೈಷಿಗಳಾದ ವಿನಯ್ ಕುಮಾರ್ ಸೊರಕೆಯವರು ನೂರುದ್ದೀನ್ ರವರ ಯಶಸ್ವಿ ವೃತ್ತಿಜೀವನದ ಬಗ್ಗೆ ಈ ಸಂದರ್ಭದಲ್ಲಿ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಜುಮಾ ಮಸ್ಜಿದ್ ಪುತ್ತೂರು ಇದರ ಅಧ್ಯಕ್ಷರಾದ, ಎಲ್ ಟಿ ಅಬ್ದುಲ್ ರಝಾಕ್ ಹಾಜಿ, ನಿವೃತ್ತ ಅಬಕಾರಿ ನಿರೀಕ್ಷಕರಾದ ಯಾಕೂಬ್ ಖಾನ್ ಬಪ್ಪಳಿಗೆ, ಅನಿವಾಸಿ ಉದ್ಯಮಿ ತಾಹಿರ್ ಸಾಲ್ಮರ,ಉದ್ಯಮಿಗಳಾದ ಅಬ್ದುಲ್ ರಜಾಕ್ ಆರ್ ಪಿ, ಅಬ್ದುಲ್ ಖಾದರ್ ಪೊಳ್ಯ, ಡಿಜಿಟಲ್ ಸೇವಾ ಕೇಂದ್ರದ ಶಾಪಿ ಹಾರಾಡಿ ಉಪಸ್ಥಿತರಿದ್ದರು.