ಪುತ್ತೂರು: ಶಾಸಕರ ವಾಹನಕ್ಕೆ ಅಡ್ಡಗಟ್ಟಿ ಗಲಭೆ ಸೃಷ್ಠಿಸಿದ ಘಟನೆ ಪುತ್ತೂರಿನ ತಾರಿಗುಡ್ಡೆ ಯಲ್ಲಿ ಅ.31 ರಂದು ನಡೆದಿದ್ದು,ಈ ಘಟನೆಗೆ ಸಂಬಂಧಿಸಿದಂತೆ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು, ಸಾರ್ವಜನಿಕರು ಠಾಣೆಯ ಮುಂಭಾಗ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಒಬ್ಬ ಪ್ರಜೆ ಪ್ರಧಾನಿಯನ್ನು ಪ್ರಶ್ನಿಸುವಂತಹ ಹಕ್ಕು ಇದೆ. ನಮ್ಮ ಓಟಿನಿಂದ ಗೆದ್ದು ಅವರು ಆ ಸ್ಥಾನಕ್ಕೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಲ್ಲಿ ರಸ್ತೆ ಕೇಳಿದಾಗ ಈ ರೀತಿ ವರ್ತಿಸುವುದು ಖಂಡನೀಯ ಒಂದು ವೇಳೆ ಅಮಾಯಕರ ಮೇಲೆ ಬಲವಂತವಾಗಿ ಪ್ರಕರಣ ದಾಖಲಾದರೇ, ನಾಳೆಯಿಂದ ಶಾಸಕರು ಹೋಗುವ ಎಲ್ಲಾ ಕಡೆಗಳಲ್ಲೂ ಶಕುಂತಲಾ ಶೆಟ್ಟಿ ಮತ್ತು ತಂಡ ಅಡ್ಡ ನಿಲ್ಲುತ್ತೇವೆ. ಇನ್ನು ಮುಂದೆ ಅವರು ಸಾರ್ವಜನಿಕರ ಜೊತೆಗೆ ಈ ರೀತಿಯಾಗಿ ವರ್ತಿಸಬಾರದು.
ಅವರು ಹೇಳುವುದೇ ಸುಳ್ಳು, ಅದರಲ್ಲಿ ಒಂದು ಸುಳ್ಳು ಜಾಸ್ತಿಯಾಗುತಿತ್ತು, 15 ದಿವಸದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚುತ್ತೇವೆ ಎಂದು ಹೇಳುತ್ತಿದ್ರೆ ಇವತ್ತಿನ ವಿಚಾರ ಮುಗಿಯುತ್ತಿತ್ತು, ಅದನ್ನು ದೊಡ್ಡ ವಿಷಯ ಮಾಡಿ ರಾಜಕೀಯ ಮಾಡುಬೇಕು ಅಂತ ಇರಲಿಲ್ಲ, ಶಾಸಕರಲ್ಲಿ ಮನವಿ ಮಾಡುವುದು ಇಷ್ಟೇ ಸಾರ್ವಜನಿಕರಲ್ಲಿ ದರ್ಪ ತೋರಿಸುವುದು ಬಿಟ್ಟು ಚೆನ್ನಾಗಿ ಮಾತಾಡಿ, ಕೆಲಸ ಆಗದಿದ್ದರೂ ಅದನ್ನು ಬೇಗ ಮಾಡಿಕೊಡುತ್ತೇವೆ ಎನ್ನುವ ಭರವಸೆಯಾದರು ನೀಡಿ ಎಂದರು.