ಪುತ್ತೂರು: ಶಾಸಕರ ವಾಹನಕ್ಕೆ ಅಡ್ಡಗಟ್ಟಿ ಗಲಭೆ ಸೃಷ್ಠಿಸಿದ ಘಟನೆ ಪುತ್ತೂರಿನ ತಾರಿಗುಡ್ಡೆ ಯಲ್ಲಿ ಅ.31 ರಂದು ನಡೆದಿದೆ.
ಅ.31 ರಂದು ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಆಯೋಜಿಸಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಾಸಕರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಗ್ರಾಮಸ್ಥರು ಊರಮಾಲು ರಸ್ತೆ ದುರಸ್ಥಿ ನಡೆಸಿಲ್ಲವೆಂದು ಹೇಳಿ ಗಲಭೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು,ಗ್ರಾಮಸ್ಥರನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿ ತಂದರು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಶಾಸಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಜಗನ್ನೀವಾಸ್ ರವರು ಠಾಣೆಗೆ ದೂರು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಜನಿಕರ ಪ್ರಕಾರ : ನಾವು ಯಾವುದೇ ಅಸಭ್ಯ ರೀತಿಯಲ್ಲಿ ವರ್ತಿಸಿಲ್ಲ, ಶಾಸಕರ ಬಳಿ ಹೇಳಿದಷ್ಟೇ ಯಾವುದೇ ತೊಂದರೆ ನೀಡಿಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ನಗರ ಸಭೆ ಸದಸ್ಯರು, ಈಗಾಗಲೇ ರಸ್ತೆ ದುರಸ್ತಿಗೆ ಯೋಜನೆ ಜಾರಿಗೊಳಿಸಿದ್ದೇವೆ. ಮಳೆಯ ಕಾರಣದಿಂದಾಗಿ ಸ್ವಲ್ಪ ತಡವಾಗಿದೆ. ಆದಷ್ಟು ಶೀಘ್ರವಾಗಿ ಕಾರ್ಯಾರಂಭ ಮಾಡಲಾಗುವುದು ಎಂದರು.