ಪುತ್ತೂರು: ಮಹಾತ್ಮಗಾಂಧಿ ‘ಗ್ರಾಮ ಸ್ವರಾಜ್ಯ’ ಕಾರ್ಯಕ್ರಮವು ಕೋಡಿಂಬಾಡಿ ಸಮಾಜ ಮಂದಿರದ ಬಳಿಯ ಸಾರ್ವಜನಿಕ ಚತುರ್ಥಿ ರಂಗಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಜರಾಮ್ ಕೆ.ಬಿ. ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮಹಮ್ಮದ್ ,ಜಿಲ್ಲಾ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಪೆರ್ನೆ, ಮಾಜಿ ಬ್ಲಾಕ್ ಅಧ್ಯಕ್ಷರಾದ ಮತ್ತು ಪ್ರಸ್ತುತ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ ಮತ್ತು ಮುರಳೀಧರ ರೈ ಮಠಂತಬೆಟ್ಟು, ವಕ್ತಾರರಾದ ರಮಾನಾಥ ವಿಟ್ಲ ,ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಮೋಹನ ಗುರ್ಜಿನಡ್ಕ ಅಸಂಘಟಿತ ಕಾರ್ಮಿಕರ ಅಧ್ಯಕ್ಷರಾದ ಸೇಸಪ್ಪ ನೆಕ್ಕಿಲು ,ಪುತ್ತೂರು ವಿಧಾನಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು ,ಬ್ಲಾಕ್ ಪ್ರಧಾನ ಕಾರ್ಯದರ್ಶಿಯಾದ ಜಗನಾಥ ಶೆಟ್ಟಿ ನಡುಮನೆ ಮತ್ತು ಯುನಿಕ್ ರೈಮನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ಅಣ್ಣು ಪೂಜಾರಿ ಆಚಾರಿ ಪಾಲು ಹುಸೇನ್ ಕೋಡಿಂಬಾಡಿ ಪದ್ಮನಾಭ ಶೆಟ್ಟಿ ರೆಂಜಜೆ ಮತ್ತುರಾಮಣ್ಣ ಗೌಡ ಬೆಳ್ಳಿಪ್ಪಾಡಿ ರವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಕನ್ನಡ ಚಿತ್ರನಟ ಪುನೀತ್ ರಾಜಕುಮಾರ್ ರವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಪೂರ್ಣಿಮಾ ಯತೀಶ್ ಶೆಟ್ಟಿ, ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ಗೀತಾ ಬಾಬು ಮೊಗೇರ, ನಿರಂಜನ ರೈ ಮಠಂತಬೆಟ್ಟು, ಪದ್ಮನಾಭ ಶೆಟ್ಟಿ ರೆಂಜಾಜೆ, ಜಗದೀಶ್ ಕಜೆ,
ಶಶಿಧರ ಕೃಷ್ಣಗಿರಿ, ರಾಮಣ್ಣ ಗೌಡ ಬೆಳ್ಳಿಪ್ಪಾಡಿ, ಯೊಗೀಶ್ ಸಾಮಾನಿ ಸಂಪಿಗೆದಡಿ,ಯತೀಶ್ ಶೆಟ್ಟಿ ಬರಮೆಲು, ಹುಸೈನ್ ಕೆ.ಬಿ.ಕೆ, ಅಣ್ಣು ಪೂಜಾರಿ ಆಚಾರಿಪಾಲು, ಸಿಲ್ವೆಸ್ಟರ್ ವೇಗಸ್,
ವಿಕ್ರಮ್ ಶೆಟ್ಟಿ ಅಂತರ, ನಿಜರ್ ಕೋಡಿಂಬಾಡಿ, ಪುರುಷೋತ್ತಮ ಶೆಟ್ಟಿ ಕೆದಿಕಂಡೆ ಗುತ್ತು, ರಾಜು ಪರಬಪಾಳು,
ಮೋಹನ್ ಗೌಡ ಮೇಲಿನಹಿತ್ಲು ಪ್ರಭಾಕರ ಸಾಮಾನಿ, ಶೀನ ದರ್ಖಾಸು ಬೋರಕೋಡಿ ಉಪಸ್ಥಿತರಿದ್ದರು.
ಕೋಡಿಂಬಾಡಿ ಬೆಳ್ಳಿಪ್ಪಾಡಿ ವಲಯ ಅಧ್ಯಕ್ಷರಾದ ಮೊನಪ್ಪ ಗೌಡ ಪಮ್ಮನಮಜಲು ಸ್ವಾಗತಿಸಿ, ಗ್ರಾಮ ಪಂಚಾಯತ್ ಸದಸ್ಯರಾದ, ಪ್ರಧಾನ ಕಾರ್ಯದರ್ಶಿಯಾದ ಜಗನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರ್ವಹಿಸಿ,ವಂದಿಸಿದರು.